ವಿಟ್ಲ: ಭಾರತ್ ಸ್ಕೌಟ್ & ಗೈಡ್ಸ್, ಸ್ಥಳೀಯಸಂಸ್ಥೆ ವಿಟ್ಲ ಇದರ ಪಟಲಾಂ ನಾಯಕರ ತರಬೇತಿ ಹಾಗೂ ಪದಕಾರ್ಜುನ ತರಬೇತಿ ಶಿಬಿರವು ಸ.ಹಿ.ಪ್ರಾ.ಶಾಲೆ ಚಂದಳಿಕೆಯಲ್ಲಿ ನ. 6ರಂದು ಗುರುವಾರ ನಡೆಯಿತು. ಶಿಬಿರದ ನೇತೃತ್ವವನ್ನು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಚಂದಳಿಕೆ ಶಾಲೆಮತ್ತು ವಿದ್ಯಾವರ್ಧಕ ಸಂಘ ಚಂದಳಿಕೆ ಶಾಲೆ ವಹಿಸಿಕೊಂಡಿದ್ದವು.

shibira

ಶಿಬಿರವ ಉದ್ಘಾಟನೆಯನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಅರುಣ್ ವಿಟ್ಲ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಶ್ರೀ ಅನಂತಕೃಷ್ಣ ಹೆಬ್ಬಾರ್ ,ನಿವೃತ್ತ ಪ್ರಾಂಶುಪಾಲರು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇವರು ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ಸುದರ್ಶನ ಪಡಿಯಾರ್, ಉಪಾಧ್ಯಕ್ಷರು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ. ಶ್ರೀ ನಾರಾಯಣ ಗೌಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಂಟ್ವಾಳ, ಶ್ರೀ ರವಿಪ್ರಕಾಶ್ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷರು ವಿಟ್ಲ ಪಟ್ಟಣ ಪಂಚಾಯತ್ , ಶ್ರೀ ಶಿವರಾಮ ಭಟ್, ಸಮೂಹ ಸಂಪನ್ಮೂಲ ವ್ಯಕ್ತಿ ವಿಟ್ಲ ಕ್ಲಸ್ಟರ್, ಶ್ರೀಮತಿ ಭವಾನಿ ರೈ ಕೊಲ್ಯ, ಅಧ್ಯಕ್ಷರು ವಿದ್ಯಾವರ್ಧಕ ಸಂಘ ಚಂದಳಿಕೆ ಶಾಲೆ, ಶ್ರೀ ಚೆನ್ನಪ್ಪ ಪೂಜಾರಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಚಂದಳಿಕೆ ಶಾಲೆ, ಶ್ರೀ ಎಂ.ಜಿ.ಕಜೆ. ಡಿಓಸಿ ಭಾರತ್ ಸ್ಕೌಟ್ಸ್ & ಗೈಡ್ಸ್, ಶ್ರೀ ದೇಜಪ್ಪ ನಿಡ್ಯ ,ಉಪಾಧ್ಯಕ್ಷರು ವಿದ್ಯಾವರ್ಧಕ ಸಂಘ ಚಂದಳಿಕೆ ಶಾಲೆ, ಶ್ರೀ ಸಂಜೀವ, ಭಾರತ್ ಶಾಮಿಯಾನ ವಿಟ್ಲ ಉಪಸ್ಥಿತರಿದ್ದರು.

ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ವಿಶ್ವನಾಥ ಗೌಡ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀಮತಿ ಪುಷ್ಪಾ, ಮುಖ್ಯೋಪಾಧ್ಯಾಯಿನಿ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕೆ ಡಿಓಸಿ ಎಂ.ಜಿ.ಕಜೆ, ಶಾರದಾ ಎಸ್.ರಾವ್ , ಲೀನಾ ರೋಡ್ರಿಗಸ್ ವಿಟ್ಲ ಇವರ ಮಾರ್ಗದರ್ಶನದಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್‍ಬುಲ್ ಪಟಲಾಂ ನಾಯಕರ ಕಾರ್ಯಾಗಾರವು ವಿಟ್ಲ ಸ್ಥಳೀಯ ಸಂಸ್ಥೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರ ಮಾರ್ಗದರ್ಶನದಲ್ಲಿ ನಡೆಯಿತು. ಈ ಶಿಬಿರದಲ್ಲಿ 24 ಶಾಲೆಯ ಸುಮಾರು 234 ಸ್ಕೌಟ್ಸ್, ಗೈಡ್ಸ್, ಬುಲ್ ಬುಲ್, ಕಬ್ ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಶಾಲಾ ಶಿಕ್ಷಕವೃಂದ, ಸ್ತ್ರೀಶಕ್ತಿ ಸಂಘದ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾವರ್ಧಕ ಸಂಘದ ಸದಸ್ಯರು , ಪೋಷಕರು ಸಹಕರಿಸಿದರು.

By suddi9

Leave a Reply

Your email address will not be published. Required fields are marked *