ಮಂಗಳೂರು: ಟಿಪ್ಪು ಜಯಂತಿಯನ್ನು ಆಚರಿಸಬಾರದು ಎಂಬ ಶ್ರೀ ರಾಮಸೇನೆಯ ಇಡೀ ರಾಜ್ಯದ ನಿಲುವಿಗಾಗಿ ಮಂಗಳೂರಿನಲ್ಲಿ ನ.4ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಮಸೇನೆಯ ವಿಭಾಗ ಅಧ್ಯಕ್ಷ ಶ್ರೀ ಆನಂದ್ ಶೆಟ್ಟಿ ಅಡ್ಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಅರುಣ್ ಶೇಟ್ಟಿ ಕದ್ರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ ಬೊಕ್ಕಪಟ್ನ, ನಗರ ಪ್ರಧಾನ ಕಾರ್ಯದರ್ಶಿ ಶ್ರೀ ವೆಂಕಟೇಶ ಪಡಿಯಾರ್, ಸಹ ಕಾರ್ಯದರ್ಶಿ ಶ್ರೀ ಪ್ರಕಾಶ್ ಭಟ್ ನಂತೂರು, ಶ್ರೀ ಪ್ರಸಾದ್ ಉಜಿರೆ ಮುಂತಾದವರು ಉಪಸ್ಥಿತರಿದ್ದರು.
