ಮಂಗಳೂರು: ಸ್ಲಂ ಮೋರ್ಚಾ ವತಿಯಿಂದ ದೀಪಾವಳಿಯ ಅಂಗವಾಗಿ ಪಚ್ಚೆನಾಡಿ ಬಸವ ಲಿಂಗೇಶ್ವರ ಸ್ಲಂ ಕೊಲೋನಿಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಉಡುಪುಗಳನ್ನು ನೀಡುವ ಮೂಲಕ ದೀಪಾವಳಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಾಮ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚೇತಕ್ ಪೂಜಾರಿ, ಸಂತೋಷ್ ತುಪ್ಪೆಕಲ್ಲು, ಸುನೀತಾ, ಮಂಗಳೂರು ಉತ್ತರ ಮಂಡಲದ ಕಾರ್ಯದರ್ಶಿ ಸಂದೀಪ್ ಪಚ್ಚೆನಾಡಿ, ರವೀಂದ್ರ ನಾಯ್ಕ ಉಪಸ್ಥಿತರಿದ್ದರು.

