ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಶಾಂತಿನಿಕೇತನ ಪ.ಪೂ. ಕಾಲೇಜು, ಖಾನಾಪುರ, ಬೆಳಗಾವಿ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಫ್ರೀಸ್ಟೈಲ್ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 8 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 2 ವಿಭಾಗದಲ್ಲಿ ಚಿನ್ನದ ಪದಕ ಮತ್ತು 4 ಬೆಳ್ಳಿ ಪದಕ ಮತ್ತು 2 ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದು ಪ್ರಶಸ್ತಿಯನ್ನು ಪಡೆದಿದ್ದಾರೆ.
ಬೆಲ್ಟ್ ಕುಸ್ತಿ ಪಂದ್ಯಾಟದಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದು ರನ್ನರ್ಸ್‍ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಮತಾ ಕೇಳೋಜಿ, ವೈಷ್ಣವಿ, ಹರ್ಷಿತಾ ಎಲ್.ಡಿ., ಸಹನಾ ಎಸ್.ಆರ್., ಪವಿತ್ರಾ ದೇಸಾಯಿ, ತುಷಾರ, ಅಂಕಿತ ಹೆಚ್., ರೂಪ ಅರಳಿಕಟ್ಟಿ ವಿವಿಧ ವಿಭಾಗಗಳಲ್ಲಿ ಪದಕ ಪಡೆದುಕೊಂಡಿದ್ದಾರೆ.


