ವಿಟ್ಲ: ಶಿವಾಜಿನಗರದ ನಿವಾಸಿ ತಿಮ್ಮಣ್ಣ ನಾಯಕ್ ಎರಡೂವರೆ ವರ್ಷದಿಂದ ಸೊಂಟದ ಕೆಳಗೆ ಬಲ ಕಳೆದುಕೊಂಡು ನಡೆಯಲು ಅಸಕ್ತರಾಗಿರುತ್ತಾರೆ. ಇವರಿಗೆ ವಿಟ್ಲ ಜೆಸಿಐ ವತಿಯಿಂದ ವೀಲ್ ಚೈರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮಾ ಗಾಂಧೀಜಿ ಜಯಂತಿ ಆಚರಣೆ ಪ್ರಯುಕ್ತ ಅವರ ಮನೆಯಲ್ಲಿ ನೀಡಲಾಯಿತು.

a1

ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷ ಬಾಬು ಕೆ ವಿ. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ನಿಕಟ ಪೂರ್ವ ಅಧ್ಯಕ್ಷ ಮೋಹನ ಮೈರ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್, ಜೇಸಿಐ ಪೂರ್ವಾಧ್ಯಕ್ಷ ಭಾಸ್ಕರ ಶೆಟ್ಟಿ, ಸದಸ್ಯರುಗಳಾದ ಮುರಳಿ ಮತ್ತು ಹರೀಶ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *