ವಿಟ್ಲ: `ಕ್ರೀಡೆಯಲ್ಲಿ ಮೇಲು ಕೀಳೆಂಬ ಭೇದವಿಲ್ಲ, ಸ್ಪರ್ಧೆ, ತಾಳ್ಮೆ, ಏಕಾಗ್ರತೆಯನ್ನು’ ಕಾಣಬಹುದಾಗಿದೆ. ವಿದ್ಯುತ್ ವ್ಯವಸ್ಥೆಯಲ್ಲಿ ದುಡಿಯುವ ಎಲ್ಲಾ ಅಧಿಕಾರಿಗಳು ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಇಲಾಖೆಯಲ್ಲಿ ಸೌಹಾರ್ದತೆಯನ್ನು ಕಾಪಾಡಬಲ್ಲುದೆಂದು’ ಮೆಸ್ಕಾಂನ ಕೇಂದ್ರ ಕಾರ್ಪೊರೇಟ್ ಕಛೇರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಹರೀಶ್ ಕುಮಾರ್ ಹೇಳಿದರು. ಅವರು ವಿಟ್ಲ ಮೆಸ್ಕಾಂ ಉಪವಿಭಾಗದ ಅಧಿಕಾರಿ/ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಹಯೋಗದಲ್ಲಿ ವಿಟ್ಲದ ವಿಠಲ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಐದನೇ ವರ್ಷದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತಾಡಿದರು.

ds-1

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರವೀಣ್ ಜೋಷಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳಾದ ಯಶವಂತ, ಸಂತೋಷ್, ಜಯಪ್ರಕಾಶ್, ದೇವದಾಸ ಕೊಟ್ಟಾರಿ, ಚಂದ್ರಹಾಸ ಕೆ ಸಿ, ಹಿರಿಯ ಗುತ್ತಿಗೆದಾರರಾದ ಕೃಷ್ಣ ಬನಾರಿ, ಬಾಬು ಮೂಲ್ಯ, ಕೆಪಿಟಿಸಿಎಲ್ ನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ಪ್ರಕಾಶ್, ಮೆಸ್ಕಾಂ ಮೇಲ್ವಿಚಾರಕರಾದ ಗೀತಾ, ಉಷಾ, ಗುತ್ತಿಗೆದಾರರ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಾಲಕೃಷ್ಣ ಸೆರ್ಕಳ, ಮೆಸ್ಕಾಂ ಮೆಕ್ಯಾನಿಕ್ ನಾಗರಾಜ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ಅವಘಡಕ್ಕೆ ಸಿಕ್ಕಿ ಅಕಾಲಿಕ ಮರಣಹೊಂದಿದ ಹರೀಶ್ ಗೌಡರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಜೆ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆಯಿತು.

ds-2

ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎ ಉಮೇಶ್ ಬಹುಮಾನ ವಿತರಿಸಿದರು. ಹಿರಿಯ ಸಹಾಯಕ ರವಿಚಂದ್ರ, ಶಾಖಾದಿಕಾರಿಗಳಾದ ದೀವಿಕಿರಣ್, ಪ್ರವೀಣ, ದಿನೇಶ್, ವಸಂತ ಗೌಡ, ಸತೀಶ, ಪ್ರಸಾದ್ ಉಪಸ್ಥಿತರಿದ್ದರು. ವಾಲಿಬಾಲ್ ಪಂದ್ಯಾಟದಲ್ಲಿ ಕೆಪಿಟಿಸಿಎಲ್ ವಿಟ್ಲ ಪ್ರಥಮ, ಮಾಣಿ ಶಾಖೆ ದ್ವಿತೀಯ, ಕಬಡ್ಡಿಯಲ್ಲಿ ಸಿ ಯಿ ಸಿ ವಿಟ್ಲ ಪ್ರಥಮ, ಉಕ್ಕುಡ ಶಾಖೆ ದ್ವಿತೀಯ, ಕ್ರಿಕೆಟ್‍ನಲ್ಲಿ ಸಾಲೆತ್ತೂರು ಪ್ರಥಮ, ಉಕ್ಕುಡ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ಕೆಪಿಟಿಸಿಎಲ್ ವಿಟ್ಲ ಪ್ರಥಮ ಮತ್ತು ಮಾಣಿ ಶಾಖೆ ದ್ವಿತೀಯ ಸ್ಥಾನ ಪಡೆಯಿತು. ವಿಟ್ಲ ಕೆಪಿಟಿಸಿಎಲ್ ನೌಕರರ ಸಂಘದ ಪ್ರಾಥಮಿಕ ಸಮಿತಿಯ ಅಧ್ಯಕ್ಷ ಪದ್ಮನಾಭ ಗೌಡ ಅಡ್ಯೇಯಿ ಸ್ವಾಗತಿಸಿದರು. ಉಕ್ಕುಡ ಶಾಖಾಧಿಕಾರಿ ಆನಂದ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *