ವಿಟ್ಲ: ದೇಶದ ಅಧ್ಬುತ ಶಕ್ತಿ ಅಹಿಂಸೆಯ ಪರಮಾವಧಿ ಎನಿಸಿದ ಮಹಾತ್ಮ ಗಾಂಧಿಜಿಯವರ 148ನೇ ಜನ್ಮದಿನಾಚರಣೆಯ ಶುಭಕಾರ್ಯಕ್ರಮವು ಸಂಸ್ಥೆಯ ಆಶ್ರಯದಲ್ಲಿ ಅ. 2ರಂದು ಸಂಭ್ರಮ ಸಡಗರದಿಂದ ನೆರವೇರಿದ್ದು ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಚಾಲನೆ ಪಡೆದುಕೊಂಡಿತು.

2

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಾಲಾ ಸಲಹಾ ಸಮಿತಿಯ ಗೌರವ ಸಲಹೆಗಾರರಾದ ಶ್ರೀಯುತ ಸುದರ್ಶನ್ ಪಡಿಯಾರ್ ದಿನ ವಿಶೇಷತೆಯನ್ನು ಸಾರಿ ಕಾರ್ಯಕ್ರಮಕ್ಕೆ ಶುಭಕೋರಿದರು. ವಿದ್ಯಾರ್ಥಿಗಳು ಗಾಂಧೀಜಿಯವರ ಅಭಿಮಾನವನ್ನು ಹಾಡು, ಭಾಷಣದೊಂದಿಗೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಮೆರೆದರು. ಶಿಕ್ಷಕರು, ವಿದ್ಯಾರ್ಥಿಗಳೆಲ್ಲರೂ ಶಾಲಾ ಮೈದಾನವನ್ನು ಸ್ವಚ್ಛಗೊಳಿಸುವ ಮೂಲಕ ದಿನವಿಶೇಷತೆಗೆ ಮೆರುಗು ನೀಡಿದರು.

ಈ ಶುಭಕಾರ್ಯಕ್ರಮವನ್ನು ಕುಮಾರಿ ಪ್ರಜ್ಞಾ ಇವರು ನಿರೂಪಿಸಿದ್ದು, ಕುಮಾರಿ ಅಲ್ವಿಶಾ ಇವರು ಸ್ವಾಗತಿಸಿದರು. ಹಾಗೆಯೇ ಕುಮಾರಿ ಗ್ಲೆವಿಟಾ ಪಾೈಸ್‍ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

By suddi9

Leave a Reply

Your email address will not be published. Required fields are marked *