ವಿಟ್ಲ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃ ಮಂಡಳಿ, ದುರ್ಗಾವಾಹಿನಿ ಪುತ್ತೂರು ಜಿಲ್ಲೆಯ ಕಾರ್ಯಕರ್ತರ ಅಭ್ಯಾಸ ವರ್ಗವು ವಿಟ್ಲ ಪ್ರಖಂಡದ ಕಂಬಳಬೆಟ್ಟು ಶ್ರೀ ದುರ್ಗಾ ಮಂದಿರದಲ್ಲಿ ಜರಗಿತು. ವರ್ಗದ ಉದ್ಘಾಟನೆಯನ್ನು ದೀಪಬೆಳಗಿಸುವುದರ ಮೂಲಕ ಪುತ್ತೂರಿನ ಶ್ರೀ ಮೂಕಾಬಿಕಾ ಗ್ಯಾಸ್ ಏಜನ್ಸೀಸ್‍ನ ಮಾಲಕ ಡಾ| ಶರತ್ ಆಳ್ವ ನೆರವೇರಿಸಿದರು. ಅಭ್ಯಾಗತರಾಗಿ ವಿ ಹಿಂ ಪ ದ ಪ್ರಾಂತ ಗೋರಕ್ಷಾ ಪ್ರಮುಖರಾದ ಶ್ರೀ ದಿನೇಶ್ ಪೈ ಕಟೀಲು ಮತ್ತು ಪ್ರಾಂತ ಸತ್ಸಂಗ ಪ್ರಮುಖ ಜಗನ್ನಾಥ ಶಾಸ್ತ್ರಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ವಿ ಹಿಂ ಪ ದ ಪುತ್ತೂರು ಜಿಲ್ಲಾಧ್ಯಕ್ಷ ಡೀಕಯ್ಯ ಪೆರ್ವೋಡಿ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್ ವೇದಿಕಯಲ್ಲಿದ್ದರು.
ಸತ್ಸಂಗ ಅಭ್ಯಾಸದ ಅವದಿಯನ್ನು ಜಗನ್ನಾಥ ಶಾಸ್ತ್ರಿಗಳು ಮತ್ತು ನಯನಾ ತೇಜ್ ರವರು ನಡೆಸಿಕೊಟ್ಟರು. ವದ್ಯಾ ಮಲ್ಯರವರು ಭಾಗವಹಿಸಿ ಹಿಂದೂ ಧರ್ಮದ ಸಂಸ್ಕøತಿಯ ಉಳಿವಿಗಾಗಿ ನಮ್ಮ ಕರ್ತವ್ಯವನ್ನು ನೆನಪಿಸಿದರು. ಬಿ ಸಿ ರೋಡಿನ ಖ್ಯಾತ ನ್ಯಾಯವಾದಿ ಪ್ರಸಾದ್ ಕುಮಾರ್ ಪುಣಚ ಇವರು ಕಾನೂನು ಮಾಹಿತಿ ನೀಡಿದರು. ಈ ವರ್ಗದಲ್ಲಿ ಬಜರಂಗದಳದ ಕರ್ನಾಟಕ ರಾಜ್ಯ ಸಂಯೋಜಕ ಶರಣ್ ಪಂಪುವೆಲ್ ಮತ್ತು ಪ್ರಾಂತ ಸುರಕ್ಷಾ ಪ್ರಮುಖ ಮುರಳಿಕೃಷ್ಣ ಹಸಂತಡ್ಕ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ವಿವೇಕಾನಂದ ವಿದ್ಯಾ ವರ್ದಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾ ಜ ಪಾ ದ ದ ಕ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ರಾಜಿವ್ ಭಂಡಾರಿ ಆಗಮಿಸಿದ್ದರು. ಆರ್ ಎಸ್ ಎಸ್ ನ ವಿಟ್ಲ ತಾಲೂಕು ಸಂಘಚಾಲಕ ವೆಂಕಟೇಶ್ವರ ಅಮೈ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಕಾಷ್ಮೀರದ ಉರಿಯಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಡೀಕಯ್ಯ ಪೆರ್ವೋಡಿ ವಿ ಹಿಂ ಪ ಮತ್ತು ಬಜರಂಗದಳದ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು. ಮುರಳಿಕೃಷ್ಣ ಹಸಂತಡ್ಕ ಸ್ವಾಗತಿಸಿ, ವಿ ಹಿಂ ಪ ದ ಪುತ್ತೂರು ಜಿಲ್ಲಾ ಹಿಂದೂ ಹೆಲ್ಪ್ ಲೈನ್‍ನ ಪ್ರಮುಖ ಜನಾರ್ಧನ ಭಟ್ಟ ವಂದಿಸಿದರು. ದುರ್ಗಾವಾಹಿನಿಯ ವಿದ್ಯಾರ್ಥಿ ಸಂಘದ ಪ್ರಮುಖ್ ದೀಕ್ಷಿತಾ ಕಲ್ಲಡ್ಕ ವೈಯ್ಯಕ್ತಿಕ ಗೀತೆ ಹಾಡಿದರು. ವಿ ಹಿಂ ಪ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ ಕುಮಾರ್ ಐ ಇಡ್ಯಾಳ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

