ಸುದ್ದಿ9 ಮಂಗಳೂರು: ಮಂಗಳೂರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸತಮಾನೋತ್ಸವ ಆಚರಣೆಯಲ್ಲಿದ್ದು 100 ಶಾಖೆ ತೆರೆಯವ ಉದ್ದೇಶ ಇದೆ 38 ದಿನಗಳಲ್ಲಿ ಹೊಸ 11ಶಾಖೆ ತೆರೆಯಾಲಾಗುವುದು ಎಂದು ಎಸ್ ಸಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರಕುಮಾರ್ ಹೇಳಿದರು. ಅವರು ಸೋಮವಾರ ಗಂಗೊಳ್ಳಿ ಮ್ಯಾಂಗ್ ನೀಸ್ ರೋಡ್ ಮಲ್ಯ ಕಾಂಪ್ಲೆಕ್ಸ್ ನಲ್ಲಿ ಎಸ್ ಸಿ ಡಿ.ಸಿ.ಸಿ ಬ್ಯಾಂಕ್ ಇದರ 71ನೇ ಶಾಖೆಯು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು .
ಉದ್ಘಾಟನೆಯನ್ನು ಬೈಂದೂರು ಶಾಸಕ ಗೋಪಾಲ ಪೂಜಾರಿ ನೆರವೇರಿಸಿದರು. ತಾಲೂಕು ಪಂಚಾಯತ್ ಸದಸ್ಯೆ ಪೂರ್ಣಿಮಾ ಖಾರ್ವಿ ಗಣಕೀಕರಣ, ಜಿ.ಪಂ ಸದಸ್ಯ ಅನಂತ ಮೊವಾಡಿ ಭದ್ರತಾ ಕೋಶ ಉದ್ಘಾಟಿಸಿದರು. ಗಂಗೊಳ್ಳಿ ಗ್ರಾ ಪಂ ಅಧ್ಯಕ್ಷೆ ರೇಷ್ಮಾ ಖಾರ್ವಿ , ಉದ್ಯಮಿ ಎಚ್.ಗಣೇಶ್ ಕಾಮತ್ ಶುಭಹಾರೈಸಿದರು .
