ವಿಟ್ಲ:ನಿರಂತರ ಗಲಭೆಗೆ ಹೆಸರುವಾಸಿಯಾದ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಲನವಲನ ವೀಕ್ಷಿಸಲು ಅಳವಡಿಸಿದ ಎರಡು ಸಿಸಿ ಕ್ಯಾಮರಾಗಳನ್ನು ಕಳವುಗೈದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಕಾಲೇಜು ಪ್ರಮುಖ ಕಟ್ಟಡದಿಂದ ಆಟದ ಮೈದಾನ ಸೇರಿ ದೂರದಲ್ಲಿರುವ ಕೊಠಡಿಗಳನ್ನು ಹಾಗೂ ವಾಹನ ಪಾರ್ಕಿಂಗ್ – ಮುಖ್ಯ ಪ್ರವೇಶ ರಸ್ತೆ – ಕ್ಯಾಂಟಿನ್ ಭಾಗವನ್ನು ದಾಖಲಿಸುತ್ತಿದ್ದ ಸಿಸಿ ಕ್ಯಾಮಾರವನ್ನು ಕಳ್ಳರು ಚಾಲಾಕಿ ತನದಿಂದ ಕಳವು ಗೈದಿದ್ದಾರೆ. ಶುಕ್ರವಾರ ತಡರಾತ್ರಿ 12.45 ಕ್ಕೆ ಒಂದು ಕ್ಯಾಮರಾ ಹಾಗೂ 15 ನಿಮಿಷಗಳ ಅಂತರದಲ್ಲಿ ಇನ್ನೊಂದು ಕ್ಯಾಮರಾ ದಾಖಾಲೀಕರಣ ಮಾಡುವುದನ್ನು ನಿಲ್ಲಿಸಿದೆ. ಈ ಬಗ್ಗೆ ಪ್ರಾಂಶುಪಾಲ ಶಂಕರ್ ಪಾಟಾಳಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *