ಕೈಕಂಬ:ವಾಮಂಜೂರಿನ ಸಂತ ಜೋಸೆಫರ ಇಗರ್ಜಿಯಲ್ಲಿ ಕನ್ಯಾ ಮರಿಯಮ್ಮನವರ ಹಬ್ಬದ ಪ್ರಯುಕ್ತ 9 ದಿನಗಳ ನೊವೆನಾವನ್ನು ಶ್ರಧ್ಧಾ ಭಕ್ತಿಯೊಂದಿಗೆ ಪ್ರಾರಂಭಿಸಲಾಯಿತು. ಚರ್ಚ್‍ನ ಧರ್ಮಗುರುಗಳಾದ ವಂ.ಸಿಪ್ರಿಯನ್ ಪಿಂಟೊರವರು ಪವಿತ್ರ ಬಲಿಪೂಜೆಯನ್ನು ಮತ್ತು ನೊವೆನಾದ ಪ್ರಾರ್ಥನಾ ವಿಧಿಗಳನ್ನು ನಡೆಸಿದರು. ತಮ್ಮ ಹಿತ್ತಲಲ್ಲಿ ಬೆಳೆದಂತದಹ ಹೂಗಳನ್ನು ತಾಯಿ ಮಾತೆಗೆ ಅರ್ಪಿಸುವುದು ಈ ನೊವೆನಾದ ವಿಶೇಷತೆ .



