ಬಿಸಿಬಿ ಪರಿಪೂರ್ಣತೆಯ ಸಮಗ್ರ ಬ್ಯಾಂಕ್: ಐಕಳ ಹರೀಶ್ ಶೆಟ್ಟಿ
ಮುಂಬಯಿ, : ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ತನ್ನ 98ನೇ ಶಾಖೆಯನ್ನು ಇಂದಿಲ್ಲಿ ಬುಧವಾರ ಬೆಳಿಗ್ಗೆ ಬೋರಿವಲಿ ಪಶ್ಚಿಮದ ಐಸಿ ಕಾಲೋನಿ ಅಲ್ಲಿನ ಅಮಿ ಜ್ಹರೊಖಾ ಕಟ್ಟಡದಲ್ಲಿ ಸೇವಾರಂಭಿಸಿದ್ದು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಹಾಗೂ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ ನೂತನ ಶಾಖೆಯನ್ನು ಶುಭಾರಂಭ ಗೊಳಿಸಿದರು.

ಅತಿಥಿüಯಾಗಿ ಜಾಗತೀಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉಪಸ್ಥಿತರಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಬೋರಿವಿಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಮೋಹನ್ ಬಿ.ಅವಿೂನ್ ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಅವರು ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ Bharat Bank (98)IC Colony Borivali-22ಶಾಖೆಯ ಸರ್ವೋನ್ನತಿಗೆ ಶುಭಕೋರಿದರು.

 

Bharat Bank (98)IC Colony Borivali-4

Bharat Bank (98)IC Colony Borivali-5

Bharat Bank (98)IC Colony Borivali-6

Bharat Bank (98)IC Colony Borivali-7

Bharat Bank (98)IC Colony Borivali-8

Bharat Bank (98)IC Colony Borivali-9

Bharat Bank (98)IC Colony Borivali-10

Bharat Bank (98)IC Colony Borivali-11

Bharat Bank (98)IC Colony Borivali-12

Bharat Bank (98)IC Colony Borivali-19

Bharat Bank (98)IC Colony Borivali-20

Bharat Bank (98)IC Colony Borivali-21

 

ಇನ್ನೆರಡು ಶಾಖೆಗಳೊಂದಿಗೆ ಶತಶಾಖೆಗಳನ್ನು ಪೂರೈಸುವ ಭಾರತ್ ಬ್ಯಾಂಕ್‍ಗೆ ಅಭಿನಂದನೆಗಳು. ಯಾವ ತೊಂದರೆಗಳನ್ನು ಎದುರಿಸದೆ ಪಾರದರ್ಶಕತ್ವದ ಸೇವೆಯೊಂದಿಗೆ ಅಲ್ಪಾವಧಿಯಲ್ಲಿ ಇಷ್ಟೋಂದು ಸಾಧನೆಗೈದ ನಮ್ಮವರ ಬ್ಯಾಂಕ್ ಮತ್ತೆ ತುಳುನಾಡಿಗೆ ಹಿರಿಮೆಯದ್ದಾಗಿದೆ. ಗ್ರಾಹಕರ ವಿಶ್ವಾಸ, ಕರ್ಮಚಾರಿಗಳ ಅವಿರತ ಶ್ರಮ, ಉನ್ನತಾಧಿಕಾರಿಗಳ ದಕ್ಷತೆ, ಆಡಳಿತ ಮಂಡಳಿಯ ಸಮರ್ಪಕತೆ ಇತ್ಯಾದಿಗಳ ಮೇಳೈಕೆಗೆ ಜಯ ಸುವರ್ಣರ ದಿಟ್ಟ ಸಾರಥ್ಯದ ನಾಯಕತ್ವದ ಕೂಡುವಿಕೆಯಿಂದ ಎಲ್ಲವೂ ಪರಿಪೂರ್ಣತೆಗೆ ಸಾಕ್ಷಿಯಾಗಿದೆ. ಜಯ ಸುವರ್ಣರು ಬರೇ ಒಂದು ಸಮುದಾಯಕ್ಕೆ ಸೇರಿದ ನಾಯಕರಲ್ಲ. ಅವರು ಸಮಗ್ರ ಸಮಾಜದ ಜನನಾಯಕ. ಏಕತಾ ಮನೋಧರ್ಮ ತುಳುನಾಡಿನ ವೈಶಿಷ್ಟ ್ಯವಾಗಿದ್ದು ಇದಕ್ಕೆ ಪೂರಕವಾಗಿ ಬ್ಯಾಂಕನ್ನು ಬೆಳೆಸಿದ ಸುವರ್ಣರ ನೇತೃತ್ವದಲ್ಲಿ ಬ್ಯಾಂಕ್ ಗುಣಾತ್ಮಕ ಮತ್ತು ಬಹುಗಾತ್ರಾತ್ಮಕ ಶಾಖೆಗಳೊಂದಿಗೆ ಪ್ರಗತಿ ಕಾಣಲಿ ಎಂದು ಐಕಳ ಹರೀಶ್ ಆಶಯ ವ್ಯಕ್ತ ಪಡಿಸಿದರು.

ಸಹಾಯಕ ಪೊಲೀಸ್ ಆಯುಕ್ತ ಸುಧಾಕರ್ ಪೂಜಾರಿ ಮಾತನಾಡಿ ಜನಸಾಮಾನ್ಯರಿಂದ ಉದಯಿಸಲ್ಪಟ್ಟ ಬ್ಯಾಂಕ್ ನೂರರತ್ತ ಸಾಗಿದ್ದು ಅಭಿನಂದನೀಯ. ಇನ್ನೂ ಬಾಣೆತ್ತರದ ಪ್ರಗತಿ ಕಾಣಲಿ ಎಂದು ಶುಭೇಚ್ಛ ಕೋರಿದರು.

ವಿಶ್ವನಾಥ್ ಪೂಜಾರಿ ಮಾತನಾಡಿ ಬ್ಯಾಂಕ್‍ನ 98ನೇ ಶಾಖೆ ಬಿಲ್ಲವರ ಸಾಧನಾ ಮುಕುಟದಲ್ಲಿ ಕಂಗೋಳಿಸುವ ವಜ್ರವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹದಿಂದ ಭವಿಷ್ಯದಲ್ಲಿ ಈ ಬ್ಯಾಂಕ್ ಬರೇ ನೂರಲ್ಲ ಸಾವಿರದ ಒಂದು ಶಾಖೆಯಾಗಿ ಬೆಳೆಯಲಿ ಎಂದರು.

ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಸಿ.ಆರ್ ಮೂಲ್ಕಿ, ಬ್ಯಾಂಕ್‍ನ ನಿರ್ದೇಶಕರುಗಳಾದ ಜ್ಯೋತಿ ಕೆ.ಸುವರ್ಣ, ಕೆ.ಎನ್ ಸುವರ್ಣ, ಯು.ಎಸ್ ಪೂಜಾರಿ, ನ್ಯಾ| ಎಸ್.ಬಿ ಅವಿೂನ್, ಹರೀಶ್ಚಂದ್ರ ಜಿ.ಮೂಲ್ಕಿ, ಕೆ.ಬಿ ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ ಉಪಸ್ಥಿತರಿದ್ದು, ನೂತನ ಶಾಖೆಯ ಮುಖ್ಯಸ್ಥೆ ರೇಖಾ ಎ.ಬಂಗೇರ, ಸಹಾಯಕ ಪ್ರಬಂಧಕಿ ಶಾಲಿನಿ ವಿ.ಅವಿೂನ್, ಲೋಕೆಶ್ ಪೂಜಾರಿ, ಪ್ರಥಮೇಶ್ ಶೆಟ್ಟಿ, ಶ್ರುತಿ ಸುವರ್ಣ, ಕಿಶೋರ್ ಕರ್ಕೇರ ಅವರಿಗೆ ಪುಷ್ಫಗುಪ್ಚವನ್ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಸಿ.ಹೆಚ್ ರವಿ, ಮ್ಯಾಥ್ಯು ಜಾಕೋಬ್, ಕೆ.ಪದ್ಮನಾಭನ್, ಅಶೋಕ್ ನಾಯರ್, ಸದಾನಂದ ಪೂಜಾರಿ ಸಂದರ್ಭೋಚಿತವಾಗಿ ಮಾತನಾಡಿ ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಶಂಸಿಸಿ ಬ್ಯಾಂಕ್ ಇನ್ನಷ್ಟು ಸರ್ವೋನ್ನತಿ ಸಾಧಿಸಲಿ ಎಂದರು.

ಗೌರವ್ವಾನಿತ ಮಹಾನೀಯರುಗಳಾಗಿ ಭವನಿ ಶಂಕರ್, ಆರ್.ಎಸ್ ಕೋಟ್ಯಾನ್, ಅನೀಲ್ ಸಾಲ್ಯಾನ್, ಕ್ರೀಡಾಪಟು ದಯಾನಂದ್ ಕುಮಾರ್, ಸಮಾಜ ಸೇವಕರುಗಳಾದ ಪ್ರೇಮನಾಥ್ ಪಿ.ಕೋಟ್ಯಾನ್, ಟಿ.ಎ ಕೋಟ್ಯಾನ್, ರಂಗಪ್ಪ ಸಿ.ಗೌಡ, ಸಿಮಂತೂರು ಚಂದ್ರಹಾಸ ಸುವರ್ಣ, ಮಹಾ ಪ್ರಂಬಧಕ ನಿತ್ಯಾನಂದ ಡಿ. ಕೋಟ್ಯಾನ್, ಉಪ ಮಹಾ ಪ್ರಂಬಧಕರುಗಳಾದ ವಿವೇಕ್ ಎಸ್.ಶ್ಯಾನ್‍ಭಾಗ್, ಸುರೇಶ್ ಎಸ್.ಸಾಲ್ಯಾನ್, ರಘು ಪೂಜಾರಿ, ನವೀನ್‍ಚಂದ್ರ ಎಸ್.ಬಂಗೇರ, ಜಗದೀಶ್ ನಾರಾಯಣ್, ಕಿಶೋರ್ ಡಿ.ಕೋಟ್ಯಾನ್, ಸಹಾಯಕ ಮಹಾ ಪ್ರಂಬಧಕರುಗಳಾದ ಡಾ| ಧನಂಜಯ ಕುಮಾರ್, ವಾಸುದೇವ ಎಂ.ಸಾಲ್ಯಾನ್, ಮಹೇಶ್ ಬಿ.ಕೋಟ್ಯಾನ್, ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್ (ನಿವೃತ್ತ), ಮಹಾ ಪ್ರಂಬಧಕಿ ಶೋಭಾ ದಯಾನಂದ್ (ನಿವೃತ್ತ), ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಕಿರಣ್ ಬಿ.ಅಮೀನ್ ಹಾಗೂ ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ, ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್, ಅವೀಶ್ ಪೂಜಾರಿ ಸೇರಿದಂತೆ ನೂರಾರು ಗ್ರಾಹಕರು, ಷೇರುದಾರರು ಮತ್ತಿತರ ಹಿತೈಷಿಗಳು ಉಪಸ್ಥಿತರಿದ್ದು ಶುಭಕೋರಿದರು.

ಉಳ್ಳೂರು ಶೇಖರ ಶಾಂತಿ ಮತ್ತು ಉಳ್ಳೂರು ಧನಂಜಯ್ ಶಾಂತಿ ಅವರು ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ದ್ವಾರಪೂಜೆ ನೆರವೇರಿಸಿ ಹರಸಿ ತೀರ್ಥಪ್ರಸಾದ ವಿತರಿಸಿದರು. ರುಕೇಶ್ ಪೂಜಾರಿ ಮತ್ತು ಶ್ವೇತಾ ರುಕೇಶ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಉಪ ಮಹಾ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿ, ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ರೇಖಾ ಎ.ಬಂಗೇರ ಧನ್ಯವದಿಸಿದರು.

By suddi9

Leave a Reply

Your email address will not be published. Required fields are marked *