ವಿಟ್ಲ: ಕಾಂತಡ್ಕ ಶ್ರೀ ಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಲಯ ಮಟ್ಟದ ಯೋಗಾಸನ ಸ್ಪರ್ಧೆಯು 6-08-2016 ರಂದು ವಿಟ್ಲ ಲಯನ್ಸ್ ಮತ್ತು ಲಯನೆಸ್ ಕ್ಲಬ್‍ಗಳ ಸಹಕಾರದೊಂದಿಗೆ ನಡೆಯಿತು. ಈ ಕಾರ್ಯಕ್ರಮವನ್ನು ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಯೋಗ ಗುರು ಆನಂದ ಶೆಟ್ಟಿ ಉದ್ಘಟಿಸಿ `ಯೋಗದ ಮುಖ್ಯ ಉದ್ದೇಶ ಆರೋಗ್ಯ ರಕ್ಷಣೆ ಯಾಗಿರಬೇಕು. ಮಕ್ಕಳು ಸ್ಪರ್ಧೆಗಾಗಿ ಯೋಗಾಭ್ಯಾಸ ಮಾಡಬಾರದು ದೇಹದ ಆರೋಗ್ಯಕ್ಕಾಗಿ ಅಭ್ಯಾಸ ಮಾಡಬೇಕು ಎಂದರು.

yogaಅಧ್ಯಕ್ಷತೆ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ವಿಟ್ಲ ಲಯನೆಸ್ ಕ್ಲಬ್ ಅಧ್ಯಕ್ಷೆ ಲೀನಾ ರೋಡ್ರಿಗಸ್, ದೈಹಿಕ ಶಿಕ್ಷಕ ರಾಜೇಂದ್ರ ರೈ ಅಳಿಕೆ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಜೆಸಿಂತಾ ಮಸ್ರೇನಸ್ ಸ್ವಾಗತಿಸಿದರು. ಶಿಕ್ಷಕ ಐತ್ತಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಸಿದರು. ಲಯನ್ಸ್ ವಲಯಾಧ್ಯಕ್ಷ ಸತೀಶ್ ಕುಮಾರ್ ಆಳ್ವ, ಪೂರ್ವಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಜಯಾ ಶೆಟ್ಟಿ , ದೈಹಿಕ ಶಿಕ್ಷಕರು, ಸಹ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *