ಮುಂಬಯಿ,: ತುಳು ಸಂಘ ಬರೋಡಾ ಇದರ ವತಿಯಿಂದ ತುಳು ಚಾವಡಿ ಸಂಭ್ರಮವನ್ನು ನಾಳೆ (ಜು.15) ಆದಿತ್ಯವಾರ ಅಪರಾಹ್ನ 2.00 ಗಂಟೆಗೆ ಗುಜರಾತ್ ರಾಜ್ಯದ ಬರೋಡಾ ರೈಲ್ವೆ ಸ್ಟೇಷನ್ ಸನಿಹದಲ್ಲಿರುವ ಗುಜರಾತ್ ಬಿಲ್ಲವ ಸಂಘ ಇದರ ಸಭಾಗೃಹದಲ್ಲಿ ನೇರವೇರಿಸಲಾಗುವುದು.

ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಸಂಭ್ರಮದಲ್ಲಿ ಗೌರವ ಅತಿಥಿsಗಳಾಗಿ ಮಂಗಳೂರುನ ಸೈಂಟ್ ಅಲೋಸಿಯಸ್ ಕಾಲೇಜು ಉಪನ್ಯಾಸಕ, ನಾಡಿನ ಹೆಸರಾಂತ ಸಾಹಿತಿ, ವಾಗ್ಮಿ ಡಾ| ಗಣೇಶ್ ಅವಿೂನ್ ಸಂಕಮಾರ್ ಡಾ| ಗಣೇಶ್ ಅಮೀನ್ ಸಂಕಮಾರ್, ಸೂಪರ್‍ಕೇರ್ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ನಿರ್ದೇಶಕ ಬೊಳ್ನಾಡುಗುತ್ತು ಚಂದ್ರಹಾಸ ಎಂ.ರೈ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಉಪಸ್ಥಿತರಿರುವರು.

5-Guru Narayana Yakshagana Mandali

555

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರುನಾರಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರು ದೇವು ಪೂಂಜಾ ಪ್ರತಾಪ ಯಕ್ಷಗಾನ ಪ್ರದರ್ಶಿಸಿದರು ಎಂದು ತುಳು ಸಂಘ ಬರೋಡಾ ಇದರ ಗೌ| ಅಧ್ಯಕ್ಷ ದಯಾನಂದ ಬೋಂಟ್ರಾ, ಕೋಶಾಧಿಕಾರಿ ವಾಸು ಪೂಜಾರಿ ತಿಳಿಸಿದ್ದಾರೆ. ಗುಜರಾತ್‍ನಾದಾದ್ಯಂತ ನೆಲೆಯಾಗಿರುವ ಸರ್ವ ತುಳು-ಕನ್ನಡಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ತುಳು ಚಾವಡಿ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ಗೌ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಈ ಮೂಲಕ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *