ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರ ವತಿಯಿಂದ ಇದೇ ಬರುವ ಆದಿತ್ಯವಾರ ತಾ. 17 ಜುಲೈ 2016 ರಂದು ನಗರದ ಪುರಭವನದಲ್ಲಿ ಸಂಜೆ 5.30 ರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪುರದ ಸಿತಾರ್ ವಾದಕ ಹಾಗೂ ಸಂಗೀತ ಪೋಷಕರಾದ ದಿವಂಗತ ಅವಿನಾಶ್ ಹೆಬ್ಬಾರ್ ಅವರಿಗೆ ಸಂಗೀತದ ಮೂಲಕ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಇದಾಗಿದ್ದು ಈ ಸಂಗೀತ ಸಂಜೆಗೆ “ಸ್ವರಾಂಜಲಿ” ಎಂದು ಹೆಸರಿಡಲಾಗಿದೆ.
ಕಾರ್ಯಕ್ರಮದ ಮೊದಲ ಭಾಗದಲ್ಲಿ ನಮ್ಮ ದೇಶದ ಪ್ರಖ್ಯಾತ ಸಿತಾರ್ ವಾದಕಿ ಬೆಂಗಳೂರಿನ ಶ್ರೀಮತಿ ಅನುಪಮಾ ಭಾಗವತ್ ಇವರಿಂದ ಸಿತಾರ್ ವಾದನ ನಡೆಯಲಿದ್ದು ಇವರಿಗೆ ತಬ್ಲಾದಲ್ಲಿ ಗೋವಾದ ಶ್ರೀ ಮಯಾಂಕ್ ಬೇಡೇಕರ್ ಸಹಕರಿಸಲಿದ್ದಾರೆ.
ಕಾರ್ಯಕ್ರಮದ ದ್ವಿತೀಯಾರ್ಧದಲ್ಲಿ ನವದೆಹಲಿಯ ಪ್ರಖ್ಯಾತ ಗಾಯಕರಾದ ಪಂ ಸಾರಥಿ ಚಟರ್ಜಿಯವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ ನಡೆಯಲಿದ್ದು ಇವರಿಗೆ ಶ್ರೀ ನರೇಂದ್ರ ಎಲ್ ನಾಯಕ್ ಹಾರ್ಮೋನಿಯಂನಲ್ಲಿ ಹಾಗೂ ಶ್ರೀ ಮಯಾಂಕ್ ಬೇಡೇಕರ್ ತಬ್ಲಾದಲ್ಲಿ ಸಹಕರಿಸಲಿದ್ದಾರೆ.
ಈ “ಸ್ವರಾಂಜಲಿ” ಕಾರ್ಯಕ್ರಮಗಳಿಗೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಈ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಶ್ರೀ ಅವಿನಾಶ್ ಹೆಬ್ಬಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾಗಿ ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರ ಎಲ್ ನಾಯಕ್ ರವರು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಕಾರ್ಯದಶರ್ಿ ಶ್ರೀ ರಾಧಾಕೃಷ್ಣ ರಾವ್ ಪೆರೋಡಿ, ಖಚಾಂಚಿ ಶ್ರೀಮತಿ ಉಷಾಪ್ರಭಾಎನ್ ನಾಯಕ್, ಟ್ರಸ್ಟಿ ಶ್ರೀ ಮುರಳೀಧರ್ ಶೆಣೈ ಹಾಗೂ ಯುವ ಸಿತಾರ್ ವಾದಕ ಶ್ರೀ ಅಂಕುಶ್ ಎನ್ ನಾಯಕ್ ಉಪಸ್ಥಿತರಿದ್ಧರು.
