ಬಂಟ್ವಾಳ; ಪ್ರಗತಿಯ ನೆಪದಲ್ಲಿ ನಿಸರ್ಗದತ್ತ ಸಸ್ಯ ಸಂಕುಲಗಳು ನಾಶವಾಗುತ್ತಿರುವುದು ವಿಪರ್ಯಾಸ. ನಿರಂತರವಾಗಿ ಕಾಡುನಾಶವಾಗುತ್ತಿರುವುದರಿಂದ ಪ್ರಕೃತಿ ವೈಪರೀತ್ಯಗಳಿಗೆ ಕಾರಣವಾಗುತ್ತಿದೆ. ಪ್ರಕೃತಿ ಉಳಿದರೆ ಮಾತ್ರ ಮಾನವ ಸಂಕುಲ ಉಳಿದೀತು ಎಂದು ಮುಖ್ಯಮಂತ್ರಿಗಳ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶಕುಂತಳಾ ಟಿ ಶೆಟ್ಟಿ ಹೇಳಿದರು. ಅವರು ಬುಧವಾರ ಬಿಲ್ಲಂಪದವು ಕೆಂಪು ಗುಡ್ಡೆಯಲ್ಲಿ ಪರಿಸರ ಜಾಗೃತಿ ಸಮಿತಿ ಅಳಿಕೆ ವತಿಯಿಂದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಬಿ.ಸಿ.ರೋಡು, ರಜತ ವರ್ಷಾಚರಣಾ ಸಮಿತಿ ಆಶ್ರಯದಲ್ಲಿ ವಿಟ್ಲ ಉಪವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಗತಿಯ ನೆಪದಲ್ಲಿ ನಿಸರ್ಗದತ್ತ ಸಸ್ಯ ಸಂಕುಲಗಳು ನಾಶವಾಗುತ್ತಿರುವುದು ವಿಪರ್ಯಾಸ. ನಿರಂತರವಾಗಿ ಕಾಡುನಾಶವಾಗುತ್ತಿರುವುದರಿಂದ ಪ್ರಕೃತಿ ವೈಪರೀತ್ಯಗಳಿಗೆ ಕಾರಣವಾಗುತ್ತಿದೆ. ಪ್ರಕೃತಿ ಉಳಿದರೆ ಮಾತ್ರ ಮಾನವ ಸಂಕುಲ ಉಳಿದೀತು ಎಂದು ಮುಖ್ಯಮಂತ್ರಿಗಳ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶಕುಂತಳಾ ಟಿ ಶೆಟ್ಟಿ ಹೇಳಿದರು. ಅವರು ಬುಧವಾರ ಬಿಲ್ಲಂಪದವು ಕೆಂಪು ಗುಡ್ಡೆಯಲ್ಲಿ ಪರಿಸರ ಜಾಗೃತಿ ಸಮಿತಿ ಅಳಿಕೆ ವತಿಯಿಂದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಬಿ.ಸಿ.ರೋಡು, ರಜತ ವರ್ಷಾಚರಣಾ ಸಮಿತಿ ಆಶ್ರಯದಲ್ಲಿ ವಿಟ್ಲ ಉಪವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೂರಕ ಮಾಹಿತಿ ಪಡೆದುಕೊಂಡು ಕ್ರಮಬದ್ಧವಾಗಿ ಗಿಡ ನೆಡುವುದರಿಂದ ಹೆಚ್ಚು ಮರಗಳನ್ನು ಕಡಿಮೆ ಜಾಗದಲ್ಲಿ ಬೆಳೆಸಬಹುದು. ಮರಗಳ ನಾಶದಿಂದ ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗುತ್ತಿದ್ದು, ಕಾಡು ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸುವ ಸಸ್ಯಗಳನ್ನು ರಕ್ಷಿತಾರಣ್ಯಗಳಲ್ಲಿ ನೆಡುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.ಜೆಡ್ಡು ಆಯುರ್ವೇದ ಚಿಕಿತ್ಸಾಲಯದ ವೈದ್ಯ ಜೆಡ್ಡು ಗಣಪತಿ ಭಟ್ ಮಾತನಾಡಿ ಸುಮಾರು 1.40ಲಕ್ಷ ಸಸ್ಯ ಪ್ರಭೇದಗಳಲ್ಲಿ 70 ಸಾವಿರ ಜಾತಿಯ ಮರಗಳು ಪಶ್ಚಿಮಘಟ್ಟ ಪ್ರದೇಶದಲ್ಲಿದೆ. 30 ಸಾವಿರ ಸಸ್ಯ ಪ್ರಭೇದಗಳು ವಿನಾಶದ ಅಂಚಿನಲ್ಲಿದೆ. ಪ್ರತಿಯೊಬ್ಬರ ಮನೆಯ ವಠಾರದಲ್ಲಿ ಸಸ್ಯಗಳನ್ನು ಬೆಳೆಸಿ ಪ್ರಭೇದಗಳನ್ನು ಉಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ವಿಟ್ಲ ಉಪವಲಯ ಅರಣ್ಯ ಇಲಾಖೆ ಉಪ ಅರಣ್ಯಾಧಿಕಾರಿ ಲೋಕೇಶ್ ಎಸ್ ಎನ್ ಮಾತನಾಡಿ ಸರ್ಕಾರದ ವತಿಯಿಂದ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದ್ದು, ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ನಮ್ಮ ಮಕ್ಕಳ ಭವಿಷ್ಯಕ್ಕಾರಿ ಮರಗಳನ್ನು ಬೆಳೆಸುವ ಅನಿವಾರ್ಯತೆ ಇದೆ. ಅಗತ್ಯವಿರುವ ಸಸಿಗಳಿಗೆ ಇಲಾಖೆಯನ್ನು ಸಂಪರ್ಕಿಸಿ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮಾತನಾಡಿ ನೆಪಕ್ಕೆ ಮಾತ್ರ ಸಸಿಗಳನ್ನು ನೆಡುವ ಕಾರ್ಯವಾಗಬಾರದು. ಮಕ್ಕಳಂತೆ ಸಸಿಗಳ ಮೇಲೆ ಪ್ರೀತಿ ಬೆಳೆದಾಗ ವೃಕ್ಷ ಸಂಕುಲ ನಮ್ಮೊಂದಿಗೆ ಸಮೃದ್ಧವಾಗಿ ಉಳಿಯಬಹುದು ಎಂದು ಹೇಳಿದರು.
ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವರ್ಮುಡಿ ಪದ್ಮಿನಿ ರಾಮ ಭಟ್ ಆಲಂಗಾರು, ವಿಟ್ಲ ಜೆಸಿಐ ಅಧ್ಯಕ್ಷ ಬಾಬು ಕೊಪ್ಪಳ, ಬಂಟ್ವಾಳ ತಾಲೂಕು ಪಂಚಾಯಿತಿ ಸದಸ್ಯ ಪದ್ಮನಾಭ ನಾಯ್ಕ ಅಳಿಕೆ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸದಸ್ಯರಾದ ಜಯದೀಶ್ ಮುಳಿಯ, ಮೋಕಾಂಬಿಕಾ ಎಂ ಭಟ್, ಅಳಿಕೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್, ಕೇಪು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ವಿಟ್ಲ ಆರಕ್ಷಕ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಪ್ರವೀಣ್ ರೈ, ರಮೇಶ್, ರಕ್ಷಿತ್ ರೈ, ಬಂಟ್ವಾಳ ರಜತ ವರ್ಷಾಚರಣಾ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್, ಕೋಶಾಧಿಕಾರಿ ಕಿಶೋರ್ ಪೆರಾಜೆ, ಕಾರ್ಯನಿರತ ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಚಂದ್ರಶೇಖರ್ ಕಲ್ಮಲೆ, ಪ್ರೆಸ್‍ಕ್ಲಬ್ ಉಪಾಧ್ಯಕ್ಷ ವಿಷ್ಣುಗುಪ್ತ ಪುಣಚ ಮತ್ತಿತರರು ಹಾಜರಿದ್ದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಉದಯಶಂಕರ ನಿರ್ಪಾಜೆ ಸ್ವಾಗತಿಸಿದರು. ಪರಿಸರ ಜಾಗೃತಿ ಸಮಿತಿ ಅಳಿಕೆ ಸಂಚಾಲಕ ಬಿಲ್ಲಂಪದವು ನಾರಾಯಣ ಭಟ್ ವಂದಿಸಿದರು. ಸುಳ್ಯ ಗಾಂಧಿನಗರ ಸರ್ಕಾರಿ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಡಾ. ಬಿ ಎನ್ ಮಹಾಲಿಂಗ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಜಾತಿ ಮರಗಳ ಸಸಿಗಳು:
ಚಿರ್ಪು (ಕಿರಾಲುಬೋಗಿ), ಸಾಗುವಾನಿ, ಪುನರ್ಪುಳಿ, ಹೆಬ್ಬಲಸು, ಮಾವು, ಕಣಜೆ, ರೆಂಜ, ಬೀಟೆ, ಸಂಪಗೆ, ಕಹಿಬೇವು, ನೇರಳೆ, ಕಾಯಿದೂಪ, ಉಪ್ಪಾಗೆ (ಮಂತುಹುಳಿ), ನಿಂಬೆಹುಳಿ ಜಾತಿಯ ಸುಮಾರು 50ಕ್ಕೂ ಅಧಿಕ ಸಸಿಗಳನ್ನು ನೆಡಲಾಯಿತು.


