ವಿಟ್ಲ: ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಜೂ. 15ರಿಂದ ಜೂ.21 ರ ತನಕ, ವಿಶ್ವ ಯೋಗ ದಿನದ ಪ್ರಯುಕ್ತ ಸೇವಾ ಭಾರತಿ ವಿಟ್ಲ ಇದರ ಆಶ್ರಯದಲ್ಲಿ ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಯೋಗ ಗುರು ಆನಂದ ಶೆಟ್ಟಿ ಇವರಿಂದ ನಡೆಸಲ್ಪಟ್ಟ ಉಚಿತ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿದರ ಸಾರೋಪ ಸಮಾರಂಭವು ಕೃಷ್ಣಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಜೂ.21ರಂದು ನಡೆಯಿತು.
SHV_5067
ಸಮಾರಂಭದ ಸಮಾರೋಪ ಭಾಷಣ ಮಾಡಿದ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ವಿ ಸುದರ್ಶನ ಪಡಿಯಾರ್ ಮಾತಾಡಿ ` ಋಷಿ ಮುನಿಗಳಿಂದ ಬಳುವಳಿಯಾಗಿ ಪಡೆದ ಯೋಗ ಈಗ ವಿಶ್ವ ಮಾನ್ಯತೆ ಪಡೆದಿದೆ. ಯೋಗ ದಿನನಿತ್ಯ ಮಾಡುವುದರಿಂದ ಶರೀರದ ಆಲಸ್ಯವನ್ನು ಹೊಡೆದೋಡಿಸಿ ಉತ್ತಮ ಆರೋಗ್ಯವನ್ನು ಪಡೆಯಬಹುದು’ ಎಂದರು. ತರಬೇತಿ ಪಡೆದ ಶ್ರೀಮಂದರ ಜೈನ್, ವಿಷ್ಣುಗುಪ್ತ ಪುಣಚ ಮತ್ತು ಸ್ಮಿತಾ ರವೀಶ್ ಆಚಾರ್ಯ ತಮ್ಮ ಅನುಭವ ಹಂಚಿಕೊಂಡರು. ಯೋಗಗುರು ಆನಂದ ಶೆಟ್ಟಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಟ್ಲ ನಗರ ಕಾರ್ಯವಾಹ ಜತ್ತಪ್ಪ ಗೌಡ ವೇದಿಕೆಯಲ್ಲಿದ್ದರು. ನಗರ ಸಂಪರ್ಕ ಪ್ರಮುಖ ಪದ್ಮನಾಭ ಕಟ್ಟೆ ಸ್ವಾಗತಿಸಿದರು. ಸೇವಾ ಪ್ರಮುಖ ಕೃಷ್ಣಪ್ಪ ವಂದಿಸಿದರು. ಹರೀಶ್ ಕೆ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *