ಸಾಲುಮರ ನಾಟಿಯೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶ

ಪಂಚಮಹಾಭೂತಗಳ ರಕ್ಷಣೆಯಅರಿವನ್ನು ಮಕ್ಕಳಲ್ಲಿ ಒಡಮೂಡಿಸಿ ಪರಿಸರ ಸಂರಕ್ಷಣೆಯಕಾರ್ಯಕ್ಕೆ ನಾವೆಲ್ಲಾಒಂದಾಗಬೇಕು. ಪಂಚ ಭೂತಗಳಲ್ಲಿ ನೀರು ಸಹ ಒಂದಾಗಿದ್ದು, ಕೆರೆ ಹೂಳೆತ್ತಿ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ನೀರಿನ ಸಂರಕ್ಷಣೆ ಮಾಡುವಕಾರ್ಯವನ್ನು ಸ್ಥಳೀಯರ ಸಹಕಾರದೊಂದಿಗೆ ಸಂಸ್ಥೆ ಮಾಡುತ್ತಿದೆಎಂದು ಧರ್ಮಸ್ಥಳದ ಧರ್ಮಾಧಿಕಾರಿಡಾ.ಡೀ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರುಧಾರವಾಡತಾಲೂಕಿನ ಮುಗದಗ್ರಾಮದಲ್ಲಿ ರೂ.2,86,000 ವೆಚ್ಚದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ(ರಿ)ಯ ಸಹಾಯಧನದೊಂದಿಗೆ ಹೂಳೆತ್ತಲಾದ ಹೊನ್ನಮ್ಮನಕೆರೆಕಾಮಗಾರಿ ವೀಕ್ಷಿಸಿರಸ್ತೆ ಬದಿಯಲ್ಲಿಸಾಲುಮರ ನಾಟಿಗೆಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.

IMG-20160616-WA0083

IMG-20160616-WA0092

IMG-20160616-WA0093

IMG-20160616-WA0094
ಅನೇಕರು ನಾವು ಅನುಭವಿಸುತ್ತಿರುವ ಭೂಮಿ ನಮ್ಮಅಜ್ಜ ಮುತ್ತಜ್ಜದಿಂರು ನೀಡಿರುವಕೊಡುಗೆಎಂದು ತಿಳಿದಿದ್ದಾರೆ.ಬದಲಾಗಿಅದು ನಮ್ಮ ಮೊಮ್ಮಕ್ಕಳು, ಮರಿ ಮಕ್ಕಳು ನೀಡಿದ ಆಸ್ತಿ ಎಂದು ತಿಳಿದು ನಮ್ಮ ಮುಂದಿನ ಪೀಳಿಗೆಗೆ ಜೋಪಾನವಾಗಿ ನೀಡುವಜವಾಬ್ದಾರಿ ನಮ್ಮ ಮೇಲಿದೆಎಂದರು.ಸಾರ್ವಜನಿಕ ಆಸ್ತಿ ಪಾಸ್ತಿಗಳು ನಮ್ಮದೇಎಂದು ತಿಳಿದು ಸಂರಕ್ಷಿಸಿದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ.ಅಂತಹ ಕೆಲಸ ಮುಗುದಗ್ರಾಮದಲ್ಲಿಆಗಿದ್ದುಅದನ್ನು ಮುಂದುವರಿಸಿಕೊಂಡು ಹೋಗುವ ಉರುತರವಾದಜವಾಬ್ದಾರಿಗ್ರಾಮದ ಪ್ರತಿಯೊಬ್ಬ ನಾಗರಿಕರ ಹೆಗಲಮೇಲಿದೆಎಂದು ತಿಳಿಸಿದರು.
ಮುಗುದಗ್ರಾ.ಪಂ ಅಧ್ಯಕ್ಷಬಸವರಾಜಕಲಕೆರೆರವರು ಮಾತನಾಡುತ್ತ ಮುಗದಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ಕೆರೆ ಬದಿಯರಸ್ತೆಅಭಿವೃದ್ಧಿಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದು ಈ ಬೇಡಿಕೆಯನ್ನುಧರ್ಮಸ್ಥಳದ ವತಿಯಿಂದ ಪೂರೈಸಿರುವುದು ಗ್ರಾಮಸ್ಥರ ಭಾಗ್ಯಎಂಬುದಾಗಿತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿಯೋಜನೆಯಕಾರ್ಯನಿರ್ವಾಹಕ ನಿರ್ದೇಶಕಡಾ.ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕಎನ್. ಜಯಶಂಕರ ಶರ್ಮ, ಗ್ರಾಮದ ಹಿರಿಯರಾದಎಸ್.ಎಸ್ ಪಿರ್ಜಾದೆ, ಸಚಿವ ವಿನಿಯ್‍ಕುಲಕರ್ಣಿ ಹಾಗೂ ಸ್ಥಳೀಯ ಶಾಸಕರಾದಅನೀಲ್ ಲಾಡ್‍ರ ಆಪ್ತ ಕಾರ್ಯದರ್ಶಿಗಳಾದ ಪ್ರಶಾಂತ್ ಮತ್ತು ಶ್ರೀಕಾಂತ್ ಹಾಗೂ ಗ್ರಾ.ಪಂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿಯೋಜನೆಯಜಿಲ್ಲಾ ನಿರ್ದೇಶಕ ದಿನೇಶ್ ಎಂ.ಪ್ರಸ್ಥಾವಿಸಿ ಸ್ವಾಗತಿಸಿದರು.ಧಾರವಾಡಯೋಜನಾಧಿಕಾರಿಕುಸುಮಾಧರ್ ಕೆ. ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *