ಟಿ.ಬಿ ಹುನ್ನೂರು ಸೇವಾರ್ಥ ಎಲೆವ್ಹೇಟರ್ ಸೇವಾರ್ಪಣೆ
ಮುಂಬಯಿ, ಮೇ.30: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದಲ್ಲಿ ಇಂದಿಲ್ಲಿ ಸೋಮವಾರ ಪೂರ್ವಾಹ್ನ ಶ್ರೀಕೃಷ್ಣ ದೇವರಿಗೆ ರಂಗಪೂಜೆ, ಮಹಾಭಿಷೇಕ, ಪ್ರಧಾನ ಕಲಶಾಭಿಷೇಕ, ಮಹಾಪೂಜೆ ಇತ್ಯಾದಿಗಳನ್ನು ನೆರವೇರಿಸಿ ಶ್ರೀಗಣಪತಿ ಮಹಾಯಾಗ ವಿಧಿವತ್ತಾಗಿ ನೆರವೇರಿಸಲಾಯಿತು.

ಇದೇ ಶುಭಾವಸರದಲ್ಲಿ ಶ್ರೀಕೃಷ್ಣ ದೇವರ ಪರಮಭಕ್ತರೂ, ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಪರಮ ಅನುಯಾಯಿ, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಬಿ ಹುನ್ನೂರು ಮತ್ತು ಮಂಜುಳಾ ಟಿ ಹುನ್ನೂರು ಪರಿವಾರವು ತಮ್ಮ ಸೇವಾರ್ಥವಾಗಿ ಕೊಡಮಾಡಿದ `ನೆಗವು’ (ಎಲೆವ್ಹೇಟರ್)ನ ಬಿರಡೆ (ಬಟನ್) ಒತ್ತಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್ ಚಾಲನೆಯನ್ನೀಡಿ ದರು. ನೂತನ ಲಿಫ್ಟ್ ಮೂಲಕ ಮಠದ ಎರಡನೇ ಮಹಡಿಯ ಮೇಲಕ್ಕೆ ತೆರಳಿದ ಗಣ್ಯರನ್ನು ಲಿಫ್ಟ್ ಅಳವಡಿಸಿದ ಸೆಂಟೂರು ಎಲೆವ್ಹೇಟರ್ಸ್ ಎಂಡ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಧನರಾಜ್ ಪುತ್ರನ್ ಬರಮಾಡಿ ಕೊಂಡು ಶುಭಾರೈಸಿದರು.

Pejawar Mutt Lift Inauguration-11

Pejawar Mutt Lift Inauguration-12

Pejawar Mutt Lift Inauguration-13

Pejawar Mutt Lift Inauguration-A2

Pejawar Mutt Lift Inauguration-B1

Pejawar Mutt Lift Inauguration-B2

ಪೇಜಾವರಶ್ರೀಗಳ ದಿವ್ಯ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಶಾಖೆಯ ಆಡಳಿತಾಧಿಕಾರಿ ರೆಂಜಾಳ ರಾಮದಾಸ ಉಪಾಧ್ಯಾಯ ಅವರು ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ವಿವಿಧ ಪೂಜಾಧಿಗಳನ್ನು ನೆರವೇರಿಸಿ ಉಪಸ್ಥಿತ ಸಮಸ್ತ ಭಕ್ತರಿಗೆ ಪ್ರಸಾದ ನೀಡಿ ಅನುಗ್ರಹಿಸಿದರು.

ಜನರನ್ನು ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಎತ್ತಿಳಿಸುವ ಯಂತ್ರ `ನೆಗವು’ (ಲಿಫ್ಟ್) ಆಗಿದೆ. ಅಂತೆಯೇ ಮೇಲಕ್ಕೆತ್ತುವ ಯಂತ್ರದಂತೆ ನಾವೂ ಸಮಾಜದಲ್ಲಿನ ಬದವ ಬಲ್ಲಿದರ ಜೀವನವನ್ನರಿತು ಪರಸ್ಪರ ಜನತೆಯನ್ನು ಮೇಲೆತ್ತಬೇಕು. ಇದು ಪ್ರತೀಯೋರ್ವ ವ್ಯಕ್ತಿಯ ಸ್ವಂತಿಕೆಯ ಮನೋಭಾವವಾಗಿ ಬೆಳೆಯಬೇಕು ಎಂದು ರಾಮದಾಸ ಉಪಾಧ್ಯಾಯ ಕಿವಿಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಐಶ್ವರ್ಯ ಹುನ್ನೂರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಜೊತೆ ಕಾರ್ಯದರ್ಶಿ ಅವಿನಾಶ್ ಶಾಸ್ತ್ರಿ, ಪೇಜಾವರ ಮಠದ ವ್ಯವಸ್ಥಾಪಕ ಶ್ರೀಹರಿ ಭಟ್, ಪತ್ರಕರ್ತ ನಾಗೇಶ್ ಪೆÇಳಲಿ (ಬೆಂಗಳೂರು), ಆಶಾ ಎ.ರಾವ್, ಸೌಭಾಗ್ಯ ಗುರುಮೂರ್ತಿ, ಕೃಷ್ಣ ವೈ.ಆಚಾರ್ಯ, ಭಾರ್ಗವ ಆಚಾರ್ಯ, ಸುನಂದ ಎಸ್.ಉಪಾಧ್ಯಾಯ, ಶ್ರೀನಿವಾಸ ರಾವ್ ಪರೇಲ್, ಶೇಖರ್ ಸಾಲ್ಯಾನ್, ಪುರೋಹಿತÀರನೇಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *