ಧರ್ಮಸ್ಥಳ ಮೇ 23 : ಶ್ರೀ ಧ.ಮಂ.ಆಂ.ಮಾಧ್ಯಮ ಶಾಲೆ,ಧರ್ಮಸ್ಥಳದ 9ನೇ ಎ ವಿಭಾಗದ ವಿದ್ಯಾರ್ಥಿನಿ ಕು.ಸುಪ್ರೀತಾ ಇವರು ಮೇ 19 ರಂದು ಮೈಸೂರಿನ ಬಾಲಭವನದಲ್ಲಿ ನಡೆದ ರಾಜ್ಯಮಟ್ಟದ ಶಾಸ್ತ್ರೀಯ ವಿಭಾಗದ ‘ಕಲಾಶ್ರೀ-ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ’ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಪರಿಮಳಾ ಎಂ.ವಿ. ತಿಳಿಸಿರುತ್ತಾರೆ.
ಇವರು ಧರ್ಮಸ್ಥಳದ ಶ್ರೀಯುತ ರಾಮಚಂದ್ರ ಕೋರ್ನಾಯ ಮತ್ತು ಶ್ರೀಮತಿ. ಶ್ರೀದೇವಿ ಇವರ ಹೆಮ್ಮೆಯ ಸುಪುತ್ರಿ ಹಾಗೂ ಉಜಿರೆಯ ಪ್ರಖ್ಯಾತ ಸಂಗೀತ ವಿದೂಷಿ ಶ್ರೀಮತಿ. ಅನಸೂಯ ದೇವಸ್ಥಳಿ ಇವರ ಶಿಷ್ಯೆ. ಇವರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿ ವೃಂದದ ಹಾರ್ದಿಕ ಅಭಿನಂದನೆಗಳು.

supreetha

By suddi9

Leave a Reply

Your email address will not be published. Required fields are marked *