ಮಂಗಳೂರು: ಖಚಿತ ವರ್ತಮಾನದ ಮೇರೆಗೆ ಕುಂದಾಪುರದ ಮನೆಯೊಂದರಲ್ಲಿ ಅನಧಿಕೃತವಾಗಿ ಗೋವುಗಳನ್ನು ವಧಿಸಿ ದನದ ಮಾಂಸ ಮಾರುತ್ತಿದ್ದ ವ್ಯಕ್ತಿಯ ಅಡ್ಡೆಗೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿ ತಪ್ಪಿಸಿದ ಘಟನೆ ನಡೆದಿದೆ. ಕುಂದಾಪುರದ ಗುಲ್ವಾಡಿ ಗ್ರಾಮದ ಕಂಡಗದ್ದೆ ನಿವಾಸಿ ಓಡಿ ಅಬೂಬಕ್ಕರ್(35) ತಪ್ಪಿಸಿಕೊಂಡ ವ್ಯಕ್ತಿ. ಈತನ ಮನೆಯಿಂದ ಸುಮಾರು ಹತ್ತಕ್ಕಿಂತಲೂ ಹೆಚ್ಚು ಗೋವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಮ್ಮಾಡಿಯ ವ್ಯಕ್ತಿಯೋರ್ವರ ಮನೆಯಿಂದ ಇತ್ತೀಚೆಗೆ ಎರಡು ದನಗಳು ಜ.22ರಂದು ನಾಪತ್ತೆಯಾಗಿದ್ದವು. ಈ ಬಗ್ಗೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದರಂತೆ ಈ ದಾಳಿ ನಡೆದಿದ್ದು ಆರೋಪಿ ತಪ್ಪಿಸಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿಕೊಂಡಿದ್ದ ಜೀಪನ್ನು ವಶಪಡಿಸಲಾಗಿದೆ
