ಗ್ರಾಹಕರ ಬಲಶೀಲತೆ ವೃದ್ಧಿಸಿದ ಭಾರತ್ ಬ್ಯಾಂಕ್: ರವಿ ಎಸ್.ಶೆಟ್ಟಿ
ಮುಂಬಯಿ, ಮೇ.19: ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 89ನೇ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ಮಹಾರಾಷ್ಟ್ರ ರಾಜ್ಯದ ಅಹ್ಮದ್‍ನಗರ್ ಜಿಲ್ಲೆಯ ರಹತ ತಾಲೂಕಿನ ಪಿಂಪಲ್‍ವಾಡಿ ಅಲ್ಲಿನ ಹೊಟೇಲ್ ಇಶೋಸನ್ಸ್ ಕಟ್ಟಡದಲ್ಲಿ ಉದ್ಘಾಟಿಸಲ್ಪಟ್ಟಿತು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ರಿಬ್ಬನ್ ಕತ್ತರಿಸಿ ಭಾರತ್ ಬ್ಯಾಂಕ್‍ನ ನೂತನ ಶಾಖೆಯನ್ನು ಉದ್ಘಾಟಿಸಿದರು. ಸಾಯಿ ಪ್ಯಾಲೇಸ್ ಹೊಟೇಲು ಸಮೂಹದ ನಿರ್ದೇಶಕ ರವಿ.ಎಸ್.ಶೆಟ್ಟಿ ಅವರು ಜ್ಯೋತಿ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದರು.
ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಅವರು ಎಟಿಎಂ ಮತ್ತು ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಅವರು ಸೇಫ್ ಲಾಕರ್‍ಗೆ ಚಾಲನೆಯನ್ನೀಡಿ ಶುಭಾರೈಸಿದರು.
ರವಿ.ಎಸ್.ಶೆಟ್ಟಿ ಶುಭಾರೈಸಿ ಸಹಕಾರಿ ಕ್ಷೇತ್ರದಲ್ಲಿ ಭಾರತ್ ಬ್ಯಾಂಕ್‍ನ ಅದ್ಭುತವಾದ ಸಾಧನೆ ಅಭಿನಂದನೀಯ. ಗಣನೀಯ ಪ್ರಮಾಣದಲ್ಲಿ ಸರ್ವಾಂಗೀಣ ಪ್ರಗತಿ ಹೊಂದಿದ ಹೆಗ್ಗಳಿಕೆ ಈ ಬ್ಯಾಂಕ್‍ಗಿದೆ. ಜಯ ಸುವರ್ಣ ರು ಬ್ಯಾಂಕ್‍ನ ಅಧಿಕಾರ ವಹಿಸಿಕೊಂಡ ಬಳಿಕ ಗಣನೀಯ ರೀತಿಯ ಪ್ರಗತಿ ಕಂಡಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಿಗೂ ಮಿಕ್ಕಿದ ಸೇವೆ ಭಾರತ್ ಬ್ಯಾಂಕ್‍ನ ವೈಖರಿಯಾಗಿದೆ. ಗ್ರಾಹಕರ ಬಲಶೀಲತೆಯ ಬ್ಯಾಂಕ್ ಇದಾಗಿದೆ. ಬ್ಯಾಂಕ್ ಮತ್ತಷ್ಟು ಯಶ ಕಾಣುವಂತಾಗಲಿ ಎಂದರು.
ಗಂಗಾಧರ್ ಅಮೀನ್ ಮಾತನಾಡಿ ಬ್ಯಾಂಕಿಂಗ್ ವ್ಯವಹಾರದ ಅರಿವು ಮೂಡಿಸುತ್ತಾ ಹಣಕಾಸು ಪ್ರೇರಣೆಗೆ ಈ ಬ್ಯಾಂಕ್ ಪೆÇ್ರೀತ್ಸಾಹದಾಯಕವಾಗಿದೆ. ಭಾರತ್ ಬ್ಯಾಂಕ್ ಬಾಂಧವ್ಯತೆಯ ಪ್ರತೀಕವಾಗಿದ್ದು ಜಯ ಸುವರ್ಣರ ಮುಂದಾಳುತ್ವದಲ್ಲಿ ಸುವರ್ಣಯುಗ ಕಂಡಿದೆ. ಆಥಿರ್üಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜವಾಬ್ದಾರಿಯುತವಾಗಿ ನಡೆಸುವುದನ್ನು ಭಾರತ್ ಬ್ಯಾಂಕ್‍ನಿಂದ ತಿಳಿಯಬೇಕು. ಕರ್ಮಚಾರಿಗಳ ದಕ್ಷತೆ, ಸರಳತೆ, ವಿನಯಶೀಲತೆ, ಪ್ರಾಮಾಣಿಕತೆ ಬ್ಯಾಂಕ್‍ನ ಗಣನೀಯ ಪ್ರಮಾಣದಲ್ಲಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತವಾಗಿದೆ ಎಂದರು.
ಬಿ.ಕೆ.ಅವಾರ್ಡ್, ಡಾ| ಏಕನಾಥ ಗೋಂಡ್ಕರ್, ಮಹೇಶ್ವರ್ ಎಸ್.ಪಾಟೀಲ್ ಮತ್ತಿತರ ಗಣ್ಯರು ಸಂದರ್ಭೋಚಿ ತವಾಗಿ ಮಾತನಾಡಿ ಶುಭೇಚ್ಛಕೋರಿದರು.
ಈ ಶುಭಾವಸರದಲ್ಲಿ ಮುಖ್ಯ ಅತಿಥಿsಗಳಾಗಿ ಶಿವಸೇನಾ ನಾಯಕ, ಶಿರ್ಡಿ ಲೋಕಸಭಾ ಕ್ಷೇತ್ರದ ಸಂಸದ ಸದಾಶಿವ್ ಲೋಖಂಡೆ, ನಾಸಿಕ್‍ನ ಕೈಗಾರಿಕೋದ್ಯಮಿ ಗಂಗಾಧರ್ ಅಮೀನ್ ನಾಸಿಕ್, ಲೀಲಾ ಜಯ ಸುವರ್ಣ, ಶಂಕರ್ ಕೆ.ಸುವರ್ಣ ಖಾರ್, ನೂತನ ಶ್ಯಾಮ ಸುವರ್ಣ ಪುಣೆ, ಕೆ.ಎನ್ ಶೆಟ್ಟಿ, ಹಾಗೂ ಸಮಾಜ ಸೇವಕರುಗಳಾದ ಶೋಭಾ ಎ.ಗೋಂಡ್ಕರ್, ವಿಶ್ವನಾಥ್ ಶೆಟ್ಟಿ, ಸತೀಶ್ ಎಸ್.ಗಂಗ್ವಾಲ್, ಶಶಿ ಶೆಟ್ಟಿ, ಬಾಲಚಂದ್ರ ಕೋಟ್ಯಾನ್ ನಾಶಿಕ್, ಧನೇಶ್ ಶೆಟ್ಟಿ ಜೆ.ಬಿ ನಗರ್, ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ನಿರ್ದೇಶಕರುಗಳಾದ ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ ಹಾಗೂ ಮಾಜಿ ನಿರ್ದೇಶಕ ಎನ್.ಎಂ ಸನೀಲ್ ಸೇರಿದಂತೆ ಸ್ಥಳೀಯ ಗ್ರಾಹಕರನೇಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಬ್ಯಾಂಕ್‍ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್, ಶಾಖಾ ಮುಖ್ಯಸ್ಥರುಗಳಾದ ಪ್ರವೀಣ್ ಕುಮಾರ್ ಅಮೀನ್ ಲೋನಾವಲ, ಸಂತೋಷ್ ಎಸ್.ಸಾಲ್ಯಾನ್ ನಾಸಿಕ್, ಅಭಿವೃದ್ಧಿ ಇಲಾಖೆಯ ಸುನೀಲ್ ಗುಜರನ್, ವಿಜಯ ಬಿ.ಪಾಲನ್, ಅವೀಶ್ ಪೂಜಾರಿ ಮತ್ತಿತರರು ಹಾಜರಿದ್ದು, ಶಾಖೆಯ ಯಶಸ್ಸಿಗೆ ಶುಭಕೋರಿದರು.
ಪುರೋಹಿತ ಶ್ರೀ ಶೇಖರ್ ಶಾಂತಿ ಉಳ್ಳೂರು, ಶ್ರೀ ಧನಂಜಯ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ಇಂದಿಲ್ಲಿ ಗಣಹೋಮ, ಲಕ್ಷ್ಮೀ ಸತ್ಯನಾರಾಯಣ ಪೂಜೆ ಮತ್ತು ದ್ವಾರಪ್ರವೇಶ ಇತ್ಯಾದಿಗಳನ್ನು ಪೂಜೆಗಳನ್ನು ವೈಧಿಕವಾಗಿ ನೆರವೇರಿಸಿ ತೀರ್ಥ-ಪ್ರಸಾದ ವಿತರಿಸಿದರು. ಗಂಗಾಧರ ಕಲ್ಲಾಡಿ ಪೂಜೆಯಲ್ಲಿ ಸಹಯೋಗ ನೀಡಿದ್ದು, ಪೂಜಾಧಿಗಳ ಯಜಮಾನತ್ವವನ್ನು ಶಾಖೆಯ ಮುಖ್ಯಸ್ಥ ರಮೇಶ್ ಜಿ.ಸುವರ್ಣ, ಶ್ರೀಮತಿ ಶೋಭಾ ರಮೇಶ್ ದಂಪತಿ ವಹಿಸಿದ್ದರು.
ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧÀಕ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸುಖಾಗಮನ ಬಯಸಿ ಕಾರ್ಯಕ್ರಮ ನಿರ್ವಾಹಿಸಿದರು. ರಮೇಶ್ ಜಿ.ಸುವರ್ಣ ಧನ್ಯವದಿಸಿದರು.










