ಭರವಸೆಯೇ ಬ್ಯಾಂಕ್‍ನ ಭದ್ರತೆಯಾಗಿದೆ: ರಘುರಾಮ ಕೆ.ಶೆಟ್ಟಿ
ಮುಂಬಯಿ, ಮೇ.09: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ತನ್ನ 88ನೇ ಶಾಖೆಯನ್ನು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಕಾಂದಿವಲಿ ಪೂರ್ವದ ಅಕುರ್ಲಿ ಇಂಡಸ್ಟ್ರೀಯಲ್ ಎಸ್ಟೇಟ್ ಮುಂಭಾಗದಲ್ಲಿನ ಶ್ರೀ ಮಿರಾ ಕೋ.ಹೌಸಿಂಗ್ ಸೊಸೈಟಿ ಮಹಡಿಯಲ್ಲಿ ಸೇವಾರಂಭಿಸಿದ್ದು, ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣರು ರಿಬ್ಬನ್ ಬಿಡಿಸಿ ನೂತನ ಶಾಖೆಯನ್ನು ಶುಭಾರಂಭ ಗೊಳಿಸಿದರು.
ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಇದರ ಟ್ರಸ್ಟೀ ಹಾಗೂ ಅವೆನ್ಯೂ ಹೊಟೇಲು ಸಮೂಹದ ನಿರ್ದೇಶಕ ರಘುರಾಮ ಕೆ.ಶೆಟ್ಟಿ (ಬೆಳಗಾಂ) ಉಪಸ್ಥಿತರಿದ್ದು, ಚಿತ್ರಾಪು ಬಿಲ್ಲವ ಸಂಘದ ಅಧ್ಯಕ್ಷರೂ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾಂದಿವಿಲಿ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಜಿ.ಟಿ ಪೂಜಾರಿ ದೀಪ ಪ್ರಜ್ವಲಿಸಿ ವಿಧ್ಯುಕ್ತÀವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್‍ನ ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆಗೆ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಅವರು ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ಶಾಖೆಯ ಸರ್ವೋನ್ನತಿಗೆ ಶುಭಕೋರಿದರು.

ಭರವಸೆಯೇ ಬ್ಯಾಂಕ್‍ನ ಭದ್ರತೆಯಾಗಿದೆ. ಇದಕ್ಕೆ ಭಾರತ್ ಬ್ಯಾಂಕ್ ಸಾಕ್ಷಿಯಾಗಿದೆ. ಕೆಳವರ್ಗದ ಜನತೆಯಲ್ಲಿ ಉಳಿತಾಯದ ಅಭ್ಯಾಸಕ್ಕೆ ಈ ಬ್ಯಾಂಕ್ ಪೂರಕವಾಗಿದ್ದು, ಲಕ್ಷಾಂತರ ಜನತೆಯ ಭವಿಷ್ಯ ನಿರ್ಮಿಸಿದ ಭಾರತ್ ಬ್ಯಾಂಕ್ ಸಹಕಾರಿ ಕ್ಷೇತ್ರಕ್ಕೆ ಹೆಮ್ಮೆಯ ಕೊಡುಗೆಯಾಗಿದೆ. ಜನಸಾಮಾನ್ಯರ ವಿವಿಧೋದ್ದೇಶಗಳ ಹಣಕಾಸು ಪರಿಹಾರಕ್ಕೆ ಭರವಸೆಯನ್ನೀಡಿದ ಈ ಬ್ಯಾಂಕ್‍ನ ಸೇವಾ ವೈಖರಿಯೇ ತ್ವರಿತವಾಗಿ ಬೆಳೆಯಲು ಕಾರಣವಾಗಿದೆ. ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಬೆಳೆದು ಸರ್ವರನ್ನೂ ಬೆಳೆಸಲಿ ಎಂದು ರಘುರಾಮ ಕೆ.ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಜಿ.ಟಿ ಪೂಜಾರಿ ಮಾತನಾಡಿ ಏಕ ಸಮಾನ ಹಾಗೂ ಮುಕ್ತಮನಸ್ಸಿನ ಸೇವೆ ಭಾರತ್ ಬ್ಯಾಂಕ್‍ನ ವೈಶಿಷ್ಟ ್ಯತೆಯಾಗಿದೆ. ಬ್ಯಾಂಕ್‍ನ ಸರ್ವೋತ್ಕೃಷ್ಟತೆಯ ಸಾಧನಾಶೀಲ ನಡಿಗೆ ಅಭಿಮಾನವೆಣಿಸುತ್ತದೆ. ಗ್ರಾಹಕರ ಭದ್ರತೆಗೆ 88ನೇ ಶಾಖೆ ಮೈಲುಕಲ್ಲುವಾಗಿದ್ದು ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಶುಭೇಚ್ಛಕೋರಿದರು.
ಉದ್ಯಮಿ ಪಿ.ಜಿ ಚರಾಯ ಮಾತನಾಡಿ ಅನೇಕ ವರ್ಷಗಳ ಈ ಬ್ಯಾಂಕ್ ನನಗೆ ಸುಮಾರು 90,000 ರೂಪಾಯಿ ಸಾಲ ನೀಡಿ ಪೆÇ್ರೀತ್ಸಾಹಿಸಿದ ಪರಿಣಾಮವೇ ಇಂದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಲು ಸಶಕ್ತನಾಗಿದ್ದೇನೆ. ಬ್ಯಾಂಕ್‍ನ ಸಮರ್ಪಕ ಮತ್ತು ವಾಸ್ತವಿಕ ಸೇವೆಯಿಂದ ನೆಮ್ಮದಿ ಪಡೆದಿದ್ದೇನೆ ಎಂದರು.
ಅಕ್ಷಯ ತೃತೀಯದ ಪರ್ವಕಾಲದಲ್ಲಿ ಇಲ್ಲಿ ಸೇವಾರಂಭಿಸಿದ ಬ್ಯಾಂಕ್ ಜನಪರ ಸೇವೆಯ ಮೂಲಕ ಸಾರ್ವಜನಿಕವಾ ಗಿ ಶೋಭಿಸಲಿ ಎಂದು ಕಟ್ಟಡದ ಮಾಲೀಕ ವಿನಯ್ ಕುಮಾರ್ ತಿಳಿಸಿದರು.
ಉದ್ಯೋಗಿವೃಂದ ಮತ್ತು ಗ್ರಾಹಕರ ಸುಗಮ ಸಂಗಮ ಬ್ಯಾಂಕ್‍ನ ಶ್ರೇಯೋಭಿವೃದ್ಧಿಗೆ ಕಾರಣ. ಸಾಮಾನ್ಯ ಜನತೆಯ ಆಶಕಿರಣ ಎಂದೇ ಜನಜನಿತ ಭಾರತ್ ಬ್ಯಾಂಕ್ ಭಾರತವಾಸಿಗಳ ಮನೆಮನಗಳಲ್ಲಿ ಬೆಳಗಲಿ ಎಂದು ಹಿರಿಯ ಸಮಾಜ ಸೇವಕ ಶಂಕರ್ ಕೆ.ಸುವರ್ಣ ಖಾರ್ ಶುಭಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಲಾಡ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ ಮಲಾಡ್ ಮಾತನಾಡಿ ಬ್ಯಾಂಕ್‍ನ ಪ್ರಸಿದ್ಧಿಗೆ ಮನೆಮನೆಗಳಿಗೆ ತೆರಳಿ ಪ್ರಚಾರಗೈಯುವ ಅಗತ್ಯವಿಲ್ಲ. ಕಾರಣ ಬ್ಯಾಂಕ್‍ನ ಸೇವಾನಿಷ್ಠೆಯೇ ಜನರ ಮನಮನಗಳಲ್ಲಿ ಅಚ್ಚಾಗಿದೆ. ಜಯ ಸುವರ್ಣರ ದಿಟ್ಟತನದ ನೇತೃತ್ವದಿಂದ ಈ ಬ್ಯಾಂಕ್ ದೇಶದ ಸಹಕಾರಿ ರಂಗದ ಬ್ಯಾಂಕುಗಳಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆಯುವಂತಾಯಿತು. ಬ್ಯಾಂಕ್ ಸದಾ ಸರ್ವೋನ್ನತಿ ಸಾಧಿಸಲಿ ಎಂದರು.
ಕನಿಕಾ ವಿ.ಕುಮಾರ್, ಸಿಎ| ವಿನಯ್‍ದೇವಿ, ಸುರೇಶ್ ಕುಮಾರ್ ಜೈನ್ ಸಂದರ್ಭೋಚಿತವಾಗಿ ಮಾತನಾಡಿ ಶುಭೇಚ್ಛ ಕೋರಿದರು.
ಕಾರ್ಯಾಧ್ಯಕ್ಷ ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಬ್ಯಾಂಕ್‍ನ ನಿರ್ದೇಶಕರುಗಳಾದ ಯು.ಎಸ್ ಪೂಜಾರಿ, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ, ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಶಂಕರ್ ಡಿ.ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಚೆಂಬೂರು ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಎಮ್.ಎನ್ ಕರ್ಕೇರ, ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಮಹಾ ಪ್ರಂಬಧಕ ನಿತ್ಯಾನಂದ ಡಿ. ಕೋಟ್ಯಾನ್ ಉಪಸ್ಥಿತರಿದ್ದು, ನೂತನ ಶಾಖೆಯ ಮುಖ್ಯಸ್ಥ ಅರುಣ್ ಎಸ್.ಸುವರ್ಣ, ಸಹಾಯಕ ಪ್ರಬಂಧಕಿ ಜಯಶ್ರೀ ಅವಿೂನ್, ಲತಿಕಾ ತೋನ್ಸೆ, ಸಾಯಿಪ್ರಸಾದ್ ಪೆÇಂಗುರ್ಳೆಕರ್, ಕಿರಣ್ ಶೆಟ್ಟಿಗಾರ್, ಮಹೇಶ್ ಕೋಟ್ಯಾನ್ ಅವರಿಗೆ ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು.
ಈ ಸಂದರ್ಭದಲ್ಲಿ ಗೌರವ್ವಾನಿತ ಅತಿಥಿüಗಳಾಗಿ ಸಮಾಜ ಸೇವಕರುಗಳಾದ ಗೋಪಾಲ್ ಅಂಚನ್, ಶ್ರೀಧರ್ ಸಾಲ್ಯಾನ್, ಪ್ರೇಮನಾಥ್ ಬಿ.ಕೋಟ್ಯಾನ್, ಉಮೇಶ್ ಎನ್.ಸುರತ್ಕಲ್, ಸದಾನಂದ ಪೂಜಾರಿ, ಆರ್.ಎಸ್ ಕೋಟ್ಯಾನ್, ಸುರೇಶ್ ಸುವರ್ಣ ಅಂಧೇರಿ, ವಿಠಲ್ ಆರ್.ಪೂಜಾರಿ, ಜಯಕರ್ ಶೆಟ್ಟಿ ಸೇರಿದಂತೆ ಬ್ಯಾಂಕ್‍ನ ಉಪ ಮಹಾ ಪ್ರಬಂಧಕ ನವೀನ್‍ಚಂದ್ರ ಬಂಗೇರ, ಸಹಾಯಕ ಮಹಾ ಪ್ರಬಂಧಕ ಡಾ| ಧನಂಜಯ ಕುಮಾರ್, ಹಿರಿಯ ಪ್ರಬಂಧಕ ವಸಂತ್ ಸಾಲ್ಯಾನ್, ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್ ಸೇರಿದಂತೆ ನೂರಾರು ಗ್ರಾಹಕರು, ಷೇರುದಾರರು ಮತ್ತಿತರ ಹಿತೈಷಿಗಳು ಉಪಸ್ಥಿತರಿದ್ದರು.
ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ದ್ವಾರಪೂಜೆ ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಛಾಯಾ ಅರುಣ್ ಸುವರ್ಣದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಡಿಜಿಎಂ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿ, ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಜಯಶ್ರೀ ಅವಿೂನ್ ಧನ್ಯವದಿಸಿದರು.








