ಬಂಟ್ವಾಳ: ಅಕ್ಕಮಹಾದೇವಿ ಶಿಶು ಮಂದಿರ ಅಜ್ಜಿಬೆಟ್ಟು ಇದರ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅಜ್ಜಿಬೆಟ್ಟು ಬಸವ ಮಂಟಪದಲ್ಲಿ ನಡೆಯಿತು. ಕಲ್ಲಡ್ಕ ಶ್ರೀರಾಮ ಮಹಾವಿದ್ಯಾಲಯದ ಮುಖ್ಯ ಪ್ರಾಚಾರ್ಯರ ಕೃಷ್ಣ ಪ್ರಸಾದ್ ಉಪನ್ಯಾಸ ಮಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಜಾರ್ ಬೀಡಿ ಮತ್ತು ಐಸ್ಕ್ರೀಮ ನ ಪಾಲುದಾರ ಲ| ಸುಧಾಕರ ಆಚಾರ್ಯ ಸಂಚಯಗಿರಿ ಅಭಿವೃದ್ದಿ ಸಂಘದ ಅಧ್ಯಕ್ಷ ಲ| ಸುಧಾಕರ ಸಾಲ್ಯಾನ್ ಶಿಶು ಮಂದಿರದ ಗೌರವಾಧ್ಯಕ್ಷ ಮೋಹನ್ ಅಗ್ರಬೈಲು, ಯುವ ನ್ಯಾಯವಾಧಿ ಪ್ರಸಾದ್ ಕುಮಾರ್ ರೈ, ಶಿಶುಮಂದಿರದ ಅಧ್ಯಕ್ಷ ಪ್ರಮೋದ್ ಕುಮಾರ್ ಮತ್ತು ಕಾರ್ಯದರ್ಶಿ ಲಕ್ಷ್ಮಣ ಅಗ್ರಬೈಲು ಉಪಸ್ಥಿತರಿದ್ದರು
