ವಾಮಂಜೂರು:ಸುಶಿಕ್ಷಿತ ಯುವಕರು ದೇಶದ ಅಭಿವೃದ್ಧಿಯ ಹರಿಕಾರರು ಎಂದು ಬೆಂಗಳೂರು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅಭಿಪ್ರಾಯಪಟ್ಟರು ಅವರು ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.
ಇಂಜಿನಿಯರಿಂಗ್ ವಿಧ್ಯಾರ್ಥಿಗಳಲ್ಲಿ ಯಾವಾಗಲೂ ಹೊಸತನವನ್ನು ಹುಟ್ಟುಹಾಕುವ ಹಂಬಲವಿರಬೇಕು.ಯುವಜನತೆಯ ಸಾಧನೆ ದೇಶದ ತಾಂತ್ರಿಕತೆ,ಕೃಷಿ,ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಬದಲಾವಣೆ ತರುವಲ್ಲಿ ಕಾರಣವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಕ್ರೆಡೈ ಅಧ್ಯಕ್ಷ ಡಾ.ಡಿ.ಬಿ ಮೆಹ್ತಾ ಮಾತನಾಡಿ ವಿದ್ಯಾರ್ಥಿಗಳು ತಮಗೆ ಇಷ್ಟವಾಗುವ ಕ್ಷೇತ್ರವನ್ನು ಆರಿಸಿ ಅದರಲ್ಲಿ ತಮ್ಮ ನಿಪುಣತೆ ತೋರಿ ವಿಶ್ವದ ಎಲ್ಲಾ ಕ್ಷೇತ್ರಗಳಲ್ಲೂ ಭಾರತದ ಛಾಪು ಮೂಡಲಿ ಎಂದರು.
ಮಂಗಳೂರು ಬಿಷಪ್ ರೆ.ಡಾ.ಅಲೋಷಿಯಸ್ ಪೌಲ್ ಡಿಸೋಜ,ಕಾಲೇಜು ನಿರ್ದೇಶಕ ರೆ.ಫಾ ಜೋಸೆಫ್ ಜೆ.ಲೋಬೋ,ಉಪನಿರ್ದೇಶಕ ರೆ.ಫಾ.ರೋಹಿತ್ ಡಿ’ಕೋಸ್ತ,ಪ್ರಾಂಶುಪಾಲ ಡಾ.ಜೋಸೆಫ್ ಗೊನ್ಸಲ್ವಿಸ್,ಉಪ ಪ್ರಾಂಶುಪಾಲ ಡಾ.ರಿಯೋ ಡಿ’ಸೋಜ ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭ ಕ್ರೀಡಾ,ಸಾಂಸ್ಕøತಿಕ,ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
