ವಾಮಂಜೂರು: ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್. ಎ.ಮಂಗಳ ಜ್ಯೋತಿ, ವಾಮಂಜೂರು ಇದರಆಶ್ರಯದಲ್ಲಿ ಪೋಷಕತ್ವ ಹೊಂದಿರುವ ಮಕ್ಕಳ ಸಾಂಸ್ಕ್ರತಿಕ ಸಮ್ಮಿಲ 2015ನ್ನುವಾಮಂಜೂರಿನಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ಡಿ.30ರಂದು ಬುಧವಾರ ನಡೆಸಲಾಯಿತು.

DSC04541

DSC04544

DSC04547

 

DSC04549

DSC04529

 

 

 

DSC04536

 

 

 

 

DSC04554

DSC04573

DSC04574“ಚಾಪರ್ಕ್”ತಂಡದ ನಿದೇರ್ಶಕರಾದ ದೇವದಾಸ್‍ ಕಾಪಿಕಾಡ್‍ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮತ್ತುಚೆಂಡೆ ಬಡಿಯುದರ ಮೂಲಕ ಉದ್ಘಾಟಿಸಿ ಮಾತಾನಾಡುತ್ತಾ ಸಾಧನೆ ಮಾಡಲು ಸಾವಿರ ದಾರಿ ಇದೆ.ಪ್ರತಿಯೊಬ್ಬರೂ ಹುಟ್ಟುವಾಗಒಂದು ಪ್ರತಿಭೆಯೊಂದಿಗೆ ಹುಟ್ಟುತ್ತಾನೆ.ಆ ಪ್ರತಿಭೆಯನ್ನು ಸರಿಯಾದರೀತಿಯಲ್ಲಿ ಉಪಯೋಗಿಸಿ ಸಾಧಿಸ ಬೇಕು, ಸಾಧನೆಯಜೊತೆಗೆ ತಂದೆತಾಯಿ, ಗುರ ಹಿರಿಯರನ್ನು ಭಕ್ತಿಯಿಂದ ಮತ್ತು ಗೌರವದಿಂದ ಕಾಣಬೇಕುಎಂದು ನುಡಿದರು.
ಕಾರ್ಯಕ್ರಮ ಆಯೋಜಕರಾದ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್. ಎ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರುಇದರಯೋಜನಾಧಿಕಾರಿಯಾದ ಶ್ರೀ ಪುನೀತ್ ಡಿ ಶೆಟ್ಟಿಯವರು ಮಾತಾನಾಡುತ್ತಾ, ಪೋಷಕತ್ವವನ್ನು ಹೊಂದಿರುವ ಮಕ್ಕಳಿಗೆ ಅಂತರ್ಗತವಾದ ಪ್ರತಿಭೆಯನ್ನು ಹೊರತರಲು ಸಮ್ಮಿಲನ 2015 ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮತ್ತು ನಿರ್ಮಾಪಕರಾದ ಶ್ರೀ ತಮ್ಮಣ್ಣ ಶೆಟ್ಟಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ವಿತರಣೆ ಮಾಡಿ ಮಾತನಾಡುತ್ತಾ, ಇತ್ತೀಚಿನ ದಿನದಲ್ಲಿ ನಗು ಮಾಯವಾಗುತ್ತಿದೆ.ದ್ವೇಷ ಜಾಸ್ತಿಯಾಗುತ್ತಿದೆ.ದು:ಖದಕಡೆಗೆಜೀವನ ಸಾಗುತ್ತದೆಪ್ರತಿಯೊಬ್ಬರಜೀವನದಲ್ಲ್ಲೂ ಕಷ್ಟ ಬರುವುದು ಸರ್ವೆ ಸಾಮಾನ್ಯ. ಬಂದ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದವನೆ ಪರಿಪೂರ್ಣ ವ್ಯಕ್ತಿಯಾಗುತ್ತಾನೆ.ಗುರುಹಿರಿಯರ, ತಂದೆ ತಾಯಿಗಳ ಆಶೀರ್ವಾದವಿದ್ದರೆ ಎಂತಹ ಸಮಸ್ಯೆಗಳನ್ನು ದೂರ ಮಾಡಬಹುದು ಮತ್ತು ನಮ್ಮಜೀವನದಲ್ಲಿ ಸಿಕ್ಕ ಸಮಯವನ್ನುಉತ್ತಮ ಕೆಲಸಕ್ಕೆ ವಿನಿಯೋಗಿಸಿ ಸಮಾಜ ಮೆಚ್ಚುವಂತಹ ವ್ಯಕ್ತಿಗಳು ನಾವಾಗ ಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗವಿಕಲರ ಕಲ್ಯಾಣ ಸಂಸ್ಥೆ, ವಾಮಂಜೂರುಇದರ ಕೋಶಾಧಿಕಾರಿಗಳಾದ ಡಾ| ಕೆ.ದೇವರಾಜ್ ಮಾತಾನಾಡುತ್ತಾ, ಮಕ್ಕಳು ವಿದ್ಯಾವಂತರಾಗಿಗೌರವಯುತವಾದ ಸ್ಥಾನಮಾನವನ್ನು ಹೊಂದಬೇಕೆಂಬ ದೃಷ್ಟಿಯಿಂದಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್. ಎಅಡಿಯಲ್ಲಿ ಪೋಷಕ್ವವನ್ನು ಪಡೆದುಕೊಂಡಿರುತ್ತಾರೆ.ಪೋಷಕರನಿರೀಕ್ಷೆಯನ್ನು ಹುಸಿಮಾಡದೆ ಅದನ್ನು ಸಾಧಿಸುವಲ್ಲಿ ನಿರತರಾಗಬೇಕುಆನೇಕ ಮಕ್ಕಳಿಗೆ ಪೋಷಕತ್ವವನ್ನು ಒದಗಿಸಿ ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಕಾರಣವಾದಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ.ಯ ಕೆಲಸ ಶ್ಲಾಘನೀಯಎಂದು ತಿಳಿಸಿದರು
ಕಾರ್ಯಕ್ರಮಕ್ಕೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಪ್ರೋ.ಎ. ರಾಜೇಂದ್ರ ಶೆಟ್ಟಿಯವರು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿಸಂಸ್ಥೆಯ ಆಡಳಿತಾಧಿಕಾರಿಯಾದ ಶ್ರೀ ಗಣೇಶ್ ಭಟ್, ಮುಖ್ಯೋಪಾಧ್ಯರಾದ ಶ್ರೀ ಆಶೋಕ್‍ಕುಮಾರ್ ಶೆಟ್ಟಿ, ಐ.ಟಿ.ಐ. ಪಾಂಶುಪಾಲರಾದ ಶ್ರೀ ನರೇಂದ್ರ, ಅಲ್ಯೂಮಿನಿ ಅಶೋಸಿಯೇಷನ್ ಆಧ್ಯಕ್ಷರಾದ ವಿಲ್ಫೆÀೃಡ್‍ಡಿಸೋಜಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್. ಎ. ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿಪೋಷಕತ್ವವನ್ನು ಹೊಂದಿರುವಮಕ್ಕಳಸಾಂಸ್ಕøತಿಕಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀಮತಿ ರಮ್ಯ ನಿರೂಪಿಸಿದರು, ಶ್ರೀಮತಿ ಲೀಲಾವತಿ ವಂದಿಸಿದರು ಶ್ರೀಮತಿ ಮಮತಾ ಸಹಕರಿಸಿದರು.

By suddi9

Leave a Reply

Your email address will not be published. Required fields are marked *