ಕೋಣಾಜೆ: ಮಾನವನು ತನ್ನದಾದ ಶರೀರದ ಸಹಿತ ಎಲ್ಲಾ ವಸ್ತುಗಳ ಬಗ್ಗೆ ನಿರ್ಲಕ್ಷ ಭಾವನೆ ತಾಳಿದ್ದು ಇದರಿಂದ ಹೊರ ಬರಬೇಕು ಎಂದು ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಅಭಿಪ್ರಾಯಪಟ್ಟರು.

ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಡಿವೈಎಫ್‍ಐ ಹರೇಕಳ ಘಟಕ, ಪ್ರೇರಣಾ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಶ್ರೀ ನಿಧಿ, ಸ್ವರ್ಣ ಶಕ್ತಿ, ದೀಪ, ಸಮೃದ್ಧಿ, ಸನ್ನಿಧಿ ಸಂಘ ಹರೇಕಳ ಇದರ ಆಶ್ರಯದಲ್ಲಿ ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಮುದಾಯ ವೈದ್ಯಕೀಯ ವಿಭಾಗದ ಸಹಕಾರದಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಡಿ.13ರಂದು ಭಾನುವಾರ ನಡೆದ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಿವೈಎಫ್‍ಐ ವಲಯ ಕೋಶಾಧಿಕಾರಿ ರಫೀಕ್ ಹರೇಕಳ ಅಧ್ಯಕ್ಷತೆ ವಹಿಸಿದ್ದರು. ಯೆನಪೋಯ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|ಅಕ್ಷಯ್, ವಲಯ ಕೋಶಾಧಿಕಾರಿ ಜೀವನ್ ಕುತ್ತಾರ್, ಶ್ರೀ ಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಹ್ಲಾದ್ ರೈ, ಮುದಲೇಮಾರ್, ಗ್ರಾ.ಪಂ. ಸದಸ್ಯರಾದ ಮಹಮ್ಮದ್ ಹನೀಫ್, ದೇವಕಿ, ಪೂವಕ್ಕು, ಡಿವೈಎಫ್‍ಐ ಹರೇಕಳ ಘಟಕಕಾಧ್ಯಕ್ಷ ನಿಝಾವ್ ಆಲಡ್ಕ, ದೈಹಿಕ ಶಿಕ್ಷಣ ಶಿಕ್ಷಿಕ ತ್ಯಾಗಂ ಮೊದಲಾದವರು ಉಪಸ್ಥಿತರಿದ್ದರು.
ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಪ್ರದೀಪ್ ಕಾಮತ್ ಸ್ವಾಗತಿಸಿದರು. ಸವಿತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


