ಕಟೀಲು: ಕಲಿಯುಗದಲ್ಲಿ ದೇವರನ್ನು ಕಾಣುವ ಸರಳ ಸುಲಭ ಮಾರ್ಗವೇ ಭಜನೆ. ಧಾರ್ಮಿಕ ಶ್ರದ್ಧೆಯ ಭಜನೆ ಏಕಾಗ್ರತೆ ಹಾಗೂ ತನ್ಮಯತೆಯನ್ನು ನೀಡುತ್ತದೆ ಎಂದು ಕಟೀಲು ದೇವಳ ಅರ್ಚಕ ಕಮಲಾಪ್ರಸಾದ ಆಸ್ರಣ್ಣ ಹೇಳಿದರು.

DSC00806

DSC00814

DSC00815
ಕಟೀಲು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಮತ್ತು ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಉಭಯ ಜಿಲ್ಲಾ ಪ್ರತಿಭಾವಂತ ಗಾಯಕ ಗಾಯಕಿಯರಿಂದ ಭಜನೆ ಮಾಡೋಣ ಬನ್ನಿರೋ-2015 ಭಜನಾ ಸ್ಪರ್ಧಾ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ದೇವಿಪ್ರಸಾದ್ ಶೆಟ್ಟಿ, ಯತೀಶ್ ಶೆಟ್ಟಿ, ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ದಿನೇಶ್ ಆಚಾರ್ಯ, ಪ್ರಥ್ವಿರಾಜ್ ಆಚಾರ್ಯ, ಭಾಸ್ಕರ ಆಚಾರ್ಯ, ಶಿವರಾಮ ಆಚಾರ್ಯ, ಉದಯಕುಮಾರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *