ನೆಲಮಂಗಲ: ದ್ವಿಚಕ್ರ ವಾಹನ ಕಳ್ಳರನ್ನು ಹಿಡಿಯಲು ಸಿಬ್ಬಂದಿಯೊಂದಿಗೆ ತೆರಳಿದ್ದ ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಗದೀಶ್ ರಿಗೆ ಆರೋಪಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
IMG-20151016-WA0017

IMG-20151016-WA0012
ನೆಲಮಂಗಲ ಸಿಎನ್ಎರ್ ಗ್ರಾನೈಟ್ಸ್ ಫ್ಯಾಕ್ಟರಿ ಬಳಿ ಚೇಸಿಂಗ್ ಮಾಡುವ ವೇಳೆ ಕಳ್ಳನೊಬ್ಬ ಎಸ್ಐ ಜಗದೀಶ್ ಅವರ ಎದೆಗೆ ಡ್ರ್ಯಾಗರ್ ನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ಇರಿತಕ್ಕೆ ಒಳಗಾದ ಜಗದೀಶ್ ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ನೆಲಮಂಗಲದ ಸಿಎನ್ಎರ್ ಗ್ರಾನೈಟ್ಸ್ ಫ್ಯಾಕ್ಟರಿ ಬಳಿ ಬೈಕ್ ಕಳ್ಳರು ಅಡಗಿರುವ ಮಾಹಿತಿ ಪಡೆದ ಜಗದೀಶ್ ಅವರು ಪೇದೆಗಳಾದ ವೆಂಕಟೇಶ್, ಚಂದ್ರ, ಶ್ರೀಧರ್, ಗಂಗಾಧರ್ ಎಂಬುವರ ಜತೆಗೆ ಸಿವಿಲ್ ಡ್ರಸ್ ನಲ್ಲಿ ತೆರಳಿದ್ದು ಇಬ್ಬರು ಆರೋಪಿಗಳನ್ನು ಜಗದೀಶ್ ತಂಡ ಹಿಡಿದಿದೆ. ಈ ವೇಳೆ ತಪ್ಪಿಸಿಕೊಳ್ಳುವ ಸಲುವಾಗಿ ಕಳ್ಳನೊಬ್ಬ ಜಗದೀಶ್ ಅವರ ಎದೆಗೆ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಿದ್ದಾರೆ.
34 ವರ್ಷದ ಜಗದೀಶ್ ಅವರು ನೆಲಮಂಗಲ ತಾಲೂಕಿನ ಮಲ್ಲಾಪುರದ ನಿವಾಸಿಯಾಗಿದ್ದು, 2009ರ ಬ್ಯಾಚ್ ನ ಪೊಲೀಸ್ ಅಧಿಕಾರಿಯಾಗಿದ್ದರು.
ಜಗದೀಶ್ ಅವರನ್ನು ಹತ್ಯೆಗೈದ ಕಳ್ಳರು ಅವರ ಬಳಿಯಿದ್ದ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದಾರೆ. ಕಳ್ಳರಾದ  ಕೃಷ್ಣ ಹಾಗೂ ಮಗ ಮಧುವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *