ಗುರುಪುರ: ಮಕ್ಕಳ ಮಾನಸಿಕ, ಆಧ್ಯಾತ್ಮಿಕ , ಸಾಮಾಜಿಕ ಬೆಳವಣಿಗೆ, ಸಂಘ ಜೀವನದ ಅನುಭವ ಮತ್ತು ಪ್ರತಿಭೆಗಳ ವಿಕಾಸವಾಗಲು ಶಿಬಿರಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಸಂಪೂರ್ಣ ಮನಸ್ಸಿನಿಂದ ಭಾಗವಹಿಸಿದರೆೆ ಶಿಬಿರದಲ್ಲಿ ಕಲಿತ ವಿಚಾರಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಎಂದು ರೋಸಾಮಿಸ್ತಿಕಾ ಹೈಸ್ಕೂಲಿನ ಮುಖ್ಯೋಪಾಧ್ಯಯನಿ ಭಗಿನಿ ಮೋರಿನ್ ಹೇಳಿದರು. ಅವರು ಎ. 21 ಸೋಮವಾರ ಕ್ಯಾಥೋಲಿಕ್ ಸಭಾ ಗುರುಪುರ ಘಟಕ ಏರ್ಪಡಿಸಿದ ಮೂರು ದಿವಸದ ಮಕ್ಕಳ ಬೇಸಗೆ ಶಿಬಿರದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಪೊಂಪೈ ದೇವಾಲಯದ ಧರ್ಮಗುರು ವಂದನೀಯ ಗ್ರೆಗರಿ ಸೆರಾವೋ ಮಾತನಾಡಿ ಉತ್ತಮ ಮೌಲ್ಯಗಳು ಜೀವನದ ಆಧಾರಸ್ತಂಭಗಳು ಅವುಗಳನ್ನು ತಿಳಿದು ಜೀವನದಲ್ಲಿ ಅಳವಡಿಬೇಕು ಎಂದರು.
ಪೊಂಪೈ ದೇವಾಲಯದ ಪಾಲನಾ ಸಮಿತಿಯ ಉಪಾಧ್ಯಕ್ಷರು ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಜೊನ್ಸನ್ ಲೋಬೊ, ಕಾರ್ಯದರ್ಶಿ ಲಿಲ್ಲಿ ಮಥಾಯಸ್, ಸಂಪನ್ಮೂಲ ವ್ಯಕ್ತಿ ಅರುಣ್ ಪೆರ್ನಾಂಡಿಸ್ ಸಿದ್ಧಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಥೋಲಿಕ್ ಸಭೆ ಗುರುಪುರ ಘಟಕದ ಅಧ್ಯಕ್ಷರಾದ ಶ್ರೀಮತಿ ಡೆಲ್ಸಿ ರೋಡ್ರಿಗಸ್ ಸ್ವಾಗತಿಸಿ ಕಾರ್ಯದರ್ಶಿ ಹೆನ್ರಿವಾಲ್ಡರ್ ವಂದಿಸಿದರು.
ಡಾ .ಗೊಡ್ವಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದ ದಿನಗಳಲ್ಲಿ ಮಾದಕದ್ರವ್ಯದ ದುಷ್ಪಾರಿಣಾಮ, ರಾಜೀ ಸಂಧಾನ ಮಾಧ್ಯಮಗಳ ಪ್ರಭಾವ, ಕೌಟುಂಬಿಕ ಮೌಲ್ಯಗಳು, ಸ್ವಚ್ಚತೆ, ಪರಿಸರ ಸಂರಕ್ಷಣೆ ಮುಂತಾದ ವಿಷಯಗಳಲ್ಲಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತರಭೇತಿ ನೀಡಿದರು. ಕೊನೆಯ ದಿನ ಮಕ್ಕಳು ತಾವು ಕಲಿತ ಮೌಲ್ಯಗಳ ಆದಾರದಲ್ಲಿ ರೂಪಕ ರಚಿಸಿ ಪ್ರದರ್ಶನ ಮಾಡಿದರು.
