ಮಂಗಳೂರು: ಮಾವಿನ ಹಣ್ಣಿನ ಸೀಸನ್ ಇಲ್ಲದ ಸಮಯದಲ್ಲಿ ಮಾವಿನ ಹಣ್ಣಿನ ದಾಹ ತೀರಿಸಬಹುದಾದ ಫ್ರೂಟಿ ತಂಪು ಪಾನೀಯದಲ್ಲಿ ಹಾವಿನ ಮರಿ ಪತ್ತೆಯಾದ ಘಟನೆಯೊಂದು ಭಟ್ಕಳದಲ್ಲಿ ಎ.23ರಂದು ವರದಿಯಾಗಿದೆ. ಭಟ್ಕಳದಲ್ಲಿ ಇದಕ್ಕಿಂತ ಜ್ಯೂಸಲ್ಲೂ ಹಾವಿನ ಮರಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು.

frooti

frooti_240414-2
ಈ ಘಟನೆ ನಡೆದಿದ್ದು ಭಟ್ಕಳದ ನಿಶಾಂತ್ ಆಸ್ಪತ್ರೆಯಲ್ಲಿ. ಮಹಿಳೆಯೋರ್ವರು ಹೆರಿಗೆಗೆಂದು ನಿಶಾಂತ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಸಂಬಂಧಿ ಮಹಿಳೆಯೋರ್ವರು ಆಗಮಿಸಿ ಸ್ಥಳೀಯ ಸಿದ್ದಿಕ್ ಫಾರ್ಮಸಿಯಿಂದ ಫ್ರೂಟಿ ಖರೀದಿಸಿ ಅಲ್ಲಿದ್ದವರಿಗೆ ವಿತರಣೆ ಮಾಡಿದ್ದರು. ಅದರಲ್ಲಿ ಮೊದಲನೆಯ ಪ್ಯಾಕೆಟನ್ನು ಬಿಚ್ಚಿ ಕುಡಿಯಲಾಗಿತ್ತು. ಮತ್ತೊಂದು ಪ್ಯಾಕೆಟನ್ನು ಹುಡುಗಿಯೋರ್ವಳು ಅದರಲ್ಲಿನ ಸ್ಟ್ರಾವನ್ನು ಸಿಕ್ಕಿಸಿ ಕುಡಿಯಲಾರಂಭಿಸಿದಳು. ಈ ಸಂದರ್ಭದಲ್ಲಿ ಸತ್ತ ಹಾವಿನ ಮರಿಯೊಂದು ಹೊರಬರಲಾರಂಭಿಸಿತು. ಇದನ್ನು ಕಂಡ ಆಕೆ ವಾಂತಿ ಮಾಡಲಾರಂಭಿಸಿದ್ದು ಇಡೀ ಆಸ್ಪತ್ರೆಯಾದ್ಯಂತ ಸುದ್ದಿಯಾಗಿತ್ತು. ಈ ಸುದ್ದಿ ಅಲ್ಲಿನ ಸುತ್ತಮುತ್ತ ಹರಡಿಕೊಂಡು ಸ್ಥಳೀಯರು ಆಸ್ಪತ್ರೆಗೆ ಆಗಮಿಸಿದ್ದಾರೆ.

ಈ ಬಗ್ಗೆ ಭಟ್ಕಳದ ಸಹಾಯಕ ಕಮಿಷನರ್, ತಹಶಿಲ್ದಾರ್ ಹಾಗೂ ಫೂಟ್ ಇನ್ಸ್ಪೆಕ್ಟರ್ಗೂ ದೂರುಹೋಗಿದ್ದು ಅವರು ಎ.23ರರಂದು ಭಟ್ಕಳದಲ್ಲಿರದ ಕಾರಣ ಮರುದಿನ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಹೀಗೆಯೇ ಆದರೆ ಇಂಥಾ ಜ್ಯೂಸ್ಗಳ ಅಸಲಿ ಕಥೆಯೇನು? ಕಂಪೆನಿಯನ್ನು ನಂಬುವುದಾದರೂ ಹೇಗೆ ಎಂಬ ಪ್ರಶನೆಯನ್ನು ಸ್ಥಳೀಯರು ಕೇಳಿದ್ದಾರೆ.

By suddi9

Leave a Reply

Your email address will not be published. Required fields are marked *