ಮಂಗಳೂರು: ಒಕ್ಟೋಬರ್ 01 : ಪೇಶ್ಕಾರ್ ಫೌಂಡೇಶನ್, ಮುಂಬೈ ಮತ್ತು ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರ ವತಿಯಿಂದ ಶನಿವಾರ ತಾ 03.10.2015 ಮತ್ತು ಭಾನುವಾರ 04.10.2015ರಂದು ಮಂಗಳೂರು ಕಾರ್ಸ್ಟ್ರೀಟ್ ವಿ.ಟಿ ರಸ್ತೆರಲ್ಲಿರುವ ನಲಂದ ಸಭಾಂಗಣದಲ್ಲಿ ಸಂಜೆ 5 ಘಂಟೆಗೆ ಪಂ ತಾರಾನಾಥ್ಜೀ ರವರ ನೂರನೇ ಹುಟ್ಟುಹಬ್ಬದ ಸವಿನೆನಪಿಗಾಗಿ ‘ಪಂ ತಾರಾನಾಥ್ ಜೀ ಸಂಗೀತ ಉತ್ಸವ’ ಎಂಬ ಉತ್ಕೃಷ್ಟ ಮಟ್ಟದ ಎರಡು ದಿನಗಳ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮಗಳ ಉತ್ಸವ ಏರ್ಪಡಿಸಲಾಗಿದೆ.
ಪಂ. ತಾರಾನಾಥ್ ರಾವ್ ಹಟ್ಟಿಯಗಡಿರವರ ಹುಟ್ಟೂರು ಮಂಗಳೂರು. ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ಧರೂ ಚಿಕ್ಕಂದಿನಿಂದ ಇಷ್ಟಪಟ್ಟಿದ್ದು ಶಾಸ್ತ್ರೀಯ ಸಂಗೀತವನ್ನು. ಇವರು ಯವಕರಾಗಿದ್ದಾಗಲೇ ತಬ್ಲಾ ನುಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದು 40, 50, 60ರ ದಶಕದಲ್ಲಿ ಬಾಬಾ ಅಲ್ಲಾವುದ್ದೀನ್ ಖಾನ್, ಉಸ್ತಾದ್ ಫಯಾಜ್ ಖಾನ್, ಪಂ ರವಿ ಶಂಕರ್, ಉಸ್ತಾದ್ ಅಲಿ ಅಕ್ಬರ್ ಖಾನ್, ಪಂ ಪನ್ನಾಲಾಲ್ ಘೋಷ್ ಹೀಗೆ ಹಲವು ಪ್ರಖ್ಯಾತ ಕಲಾವಿದರಿಗೆ ತಬ್ಲಾದಲ್ಲಿ ಸಾಥ್ ನೀಡಿ ಅಂತರಾಷ್ಟೀ0ು ಮಟ್ಟದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿ ಗುರುತಿಸಿಕೊಂಡವರು.
ಅಪಾರ ಶಿಷ್ಯ ವರ್ಗವನ್ನು ಹೊಂದಿರುವ ಪಂ ತಾರಾನಾಥ್ಜೀ ಯವರು ಅಂತರಾಷ್ಟ್ರೀಯ ಮಟ್ಟಕ್ಕೇರಿದ ಮಂಗಳೂರಿನ ಪ್ರಥಮ ಕಲಾವಿದರೆನ್ನುವುದು ಹೆಮ್ಮೆಯ ವಿಷಯ. 1990ರಲ್ಲಿ ಪಂ ತಾರಾನಾಥ್ಜೀ ಯವರು ಭಾರತೀಯ ಸಂಗೀತ ತಾಳವಾದ್ಯ ಪ್ರಕಾರಗಳನ್ನು ಜನಪ್ರಿಯ ಗೊಳಿಸುವ ನಿಟ್ಟಿನಲ್ಲಿ ಮುಂಬೈಯಲ್ಲಿ ಪೇಶ್ಕಾರ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.
ಯುವ ಕಲಾವಿದರನ್ನು ಹುರಿದುಂಬಿಸಿ ತನ್ಮೂಲಕ ಭಾರತೀಯ ಸಂಗೀತವನ್ನು ಜನಪ್ರಿಯಗೊಳಿಸುವುದೇ ಈ ಸಂಸ್ಥೆಯ ಉದ್ದೇಶ. 1991ರಲ್ಲಿ ಪಂ ತಾರಾನಾಥ್ಜೀ ಯವರು ಇಹಲೋಕ ತ್ಯಜಿಸಿದರೂ ಅವರ ಅಪಾರ ಶಿಷ್ಯವರ್ಗ ಅವರು ಆರಂಭಿಸಿದ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುವಲ್ಲಿ ಸಫಲರಾಗಿದ್ದಾರೆ.
ಇದೇ ಅಕ್ಟೋಬರ್ 3 ಮತ್ತು 4 ರಂದು ನಡೆಯುವ 2 ದಿನಗಳ ಸಂಗೀತೋತ್ಸವವನ್ನು ನಡೆಸಿಕೊಡುವಲ್ಲಿ ನಗರದ ಸಂಗೀತ ಭಾರತಿ ಪ್ರತಿಷ್ಠಾನ ಮುಂದೆ ಬಂದಿದ್ದು ಮಂಗಳೂರು ಹಾಗೂ ಆಸುಪಾಸಿನ ಸಂಗೀತ ಆಸಕ್ತಿಯುಳ್ಳ ಜನರಿಗೆ ಸಂಗೀತದ ರಸದೌತಣ ಒದಗಲಿದೆ.
ಮೊದಲ ದಿನ ಶನಿವಾರ ತಾ 03.10.2015 ರಂದು ಪಂ ತಾರಾನಾಥ್ಜೀ ಯವರ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ, ಮುಂಬೈನ ಶ್ರೀ ಉದಯ್ ರಾಯ್ಕರ್ ಅವರಿಂದ ಸೋಲೋ ತಬ್ಲಾ ವಾದನ, ಬೆಂಗಳೂರಿನ ಪ್ರಸಿದ್ಧ ಗಾಯಕಿ ಸಂಗೀತಾ ಕಟ್ಟಿ ಅವರಿಂದ ಶಾಸ್ತ್ರೀಯಸಂಗೀತ, ಮಂಗಳೂರಿನ ಪ್ರಖ್ಯಾತ ಸಿತಾರ್ ವಾದಕರಾದ ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ್ ವಾದನ ನಡೆಯಲಿದ್ದು,
ಭಾನುವಾರ ತಾ 04.10.2015 ರಂದು ಮುಂಬೈನ ಶ್ರೀ ಅಶೋಕ್ ಬೆಳ್ಳಾರೆ ಅವರಿಂದ ಸಂತೂರ್ ವಾದನ, ಸೋಲಾಪುರದ ಪಂ ಆನಂದ್ ಬದಾಮಿಕಾರ್ ಅವರಿಂದ ಸೋಲೋ ತಬ್ಲಾ ವಾದನ, ಧಾರವಾಡದ ಪಂ ವೆಂಕಟೇಶ್ ಕುಮಾರ್ ರವರ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ ನಡೆಯಲಿದೆ.
ಮೇಲಿನ ಕಾರ್ಯಕ್ರಮಗಳಿಗೆ ತಬ್ಲಾ ಸಾಥೀದಾರರಾಗಿ ಮುಂಬೈನ ಪಂ ಸದಾನಂದ ನಯಂಪಳ್ಳಿ ಮತ್ತು ಮುಂಬೈನ ಪಂ ಓಂಕಾರ್ ಗುಲ್ವಾಡಿ ಹಾಗೂ ಹಾಮರ್ೊನಿಯಂ ಸಾಥೀದಾರರಾಗಿ ಮಂಗಳೂರಿನ ಶ್ರೀ ನರೇಂದ್ರ ಎಲ್. ನಾಯಕ್ ಮತ್ತು ಮುಂಬೈನ ಶ್ರೀ ಸುಧೀರ್ ನಾಯಕ್ ರವರು ಸಹಕರಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತಾಸಕ್ತರು ಇದರ ಪ್ರಯೋಜನ ಪಡೆಯಬೇಕಾಗಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್ ಅವರು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷರಾದ ಶ್ರೀ ನರೇಂದ್ರ ಎಲ್. ನಾಯಕ್, ಕಾರ್ಯದಶರ್ಿ ರಾಧಾಕೃಷ್ಣ ರಾವ್ ಪೆರೋಡಿ, ಖಚಾಂಚಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ಅವರು ಉಪಸ್ಥಿತರಿದ್ಧರು.


