ಮೂಲ್ಕಿ: ಕುಬೆವೂರು ಶಿಮಂತೂರು ಬಳಿಯ ರೈಲ್ವೇ ಹಳಿಯಲ್ಲಿ ಸ್ಥಳೀಯ ಕೆರೆಕಾಡಿನ ಯುವಕನೋರ್ವನ ಶವವು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕಿಸಲಾಗಿದೆ.
ಕೆರೆಕಾಡಿನ ಕೆನರಾ ಲೈಟಿಂಗ್ ಹಿಂಭಾಗದ ದೂಮಪ್ಪ ಬಂಗೇರರವರ ಪುತ್ರ ಸೀತಾರಾಮ ಕುಲಾಲ್(36) ಮೃತಪಟ್ಟ ದುರ್ದೈವಿ.

ಅನಾರೋಗ್ಯ ನಿಮಿತ್ತ ಔಷಧಿ ತರಲೆಂದು ಮನೆಯಿಂದ ಹೊರಟಿದ್ದ ನಂತರ ಇವರ ಶವ ಈ ರೀತಿ ಪತ್ತೆಯಾಗಿದೆ. ಆದರೆ ಇವರ ಸಾವಿನ ಬಗ್ಗೆ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
