ಸುದ್ದಿ9 ಮಂಗಳೂರು :ಜಿಲ್ಲಾಧಿಕಾರಿಯವರ ಆದೇಶದ ಹೊರತಾಗಿಯೂ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಆಮ್ ಆದಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಬ್ರಹ್ಮರಕೂಟ್ಲುವಿನ ಟೋಲ್ ಪ್ಲಾಝಾದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.ಚುಣಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಮಂಗಳೂರು ಜಿಲ್ಲಾದಿಕಾರಿ ಸೂಚನೆ ನೀಡಿದರೂ ಅದನ್ನು ಪಾಲಿಸದೆ ಟೋಲ್ ಪ್ಲಾಝಾದಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿದ ಪ್ರತಿಭಟನಾಕಾರರು, ರಾಷ್ಟ್ರೀಯ ಹೆದ್ದಾರಿ ಪಾಧಿಕಾರ ಹಾಗೂ ಟೋಲ್ ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸುತ್ತಿದ್ದ ವಾಹನ ಚಾಲಕರಲ್ಲಿ ಹಳೆ ದರವನ್ನು ನೀಡುವಂತೆ ಮನವಿ ಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಆಮ್ ಆದ್ಮಿ ಪಕ್ಷದ ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯಥರ್ಿ ವಾಸುದೇವ ರಾವ್ ಮಾತಾನಾಡಿ, ಹೆಚ್ಚುವರಿ ವಾಹನ ಶುಲ್ಕ ಸಂಗ್ರಹಿಸುವ ವಿರುದ್ಧ ಏ.1ರಂದು ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಪರಿಷ್ಕ್ರತ ದರವನ್ನು ಸಂಗ್ರಹಿಸದೇ ಹಳೆ ದರವನ್ನು ಸಂಗ್ರಹಿಸುವಂತೆ ಲಿಖಿತವಾಗಿ ಸೂಚನೆ ನೀಡಿದ್ದರು.ಆದರೆ ಇದೀಗ 17ದಿನ ಕಳೆದರೂ ಜಿಲ್ಲಾಧಿಕಾರಿ ಆದೇಶವನ್ನು ಇಲ್ಲಿ ಪಾಲನೇ ಮಾಡದೇ ಇರುವುದರಿಂದ ಅನಿವಾರ್ಯವಾಗಿ ಪ್ರತಿಭಟನೆ ನಡೆಸಲಾಗಿದೆ ಎಂದರು.ಗುತ್ತಿಗೆದಾರ ಗೋಪಾಲಕೃಷ್ಣ ಮೇಲಾಂಟ, ನಗರ ಪೊಲೀಸ್ ಠಾಣೆ ಎಸ್ಸೈ

ಸಂಜೀತ್ ಕಲ್ಲೂರು ಹಾಜರಿದ್ದರು

3 (8)

1 (12)

2 (8)

By suddi9

Leave a Reply

Your email address will not be published. Required fields are marked *