ಬಂಟ್ವಾಳ : ಬಂಟ್ವಾಳ  ತಾಲೂಕು ಕಾವಳಮೂಡೂರು ಕೆದ್ದಳಿಕೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಮಂಗಳೂರು ಆಲ್‍ಕಾರ್ಗೊಲಾಜಿಸ್ಟಿಕ್ ಸಂಸ್ಥೆ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ ಜು.28ರಂದು ಮಂಗಳವಾರ ಜರಗಿತು.

3007pkt4
ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಆಲ್‍ಕಾರ್ಗೊ ಸಂಸ್ಥೆಯ ಮೆನೇಜರ್ ಸುರೇಂದ್ರ ಶೆಟ್ಟಿ ಅವರು ಶಾಲಾವಿದ್ಯಾರ್ಥಿಗಳ   ಪೋಷಕರಿಗೆ ಮತ್ತು ಗ್ರಾಮಸ್ಥರಿಗೆ ವಿವಿಧ ರೀತಿಯ ಔಷಧೀಯ ಮತ್ತು ಹಣ್ಣಿನ ಗಿಡಗಳನ್ನು ವಿತರಿಸಿದರು. ಸಂಸ್ಥೆಯ ಹಸಿರು ವಲಯದ ಸಲಹೆಗಾರ ದಿನೇಶ್ ನಾಯಕ್ ಅವರು ಸಸಿ ನೆಡುವಿಕೆ, ಪಾಲನೆ, ಪೋಷಣೆ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಯಾಕೂಬ್ ಸಾಹೇಬ್, ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಮೋಹನ ಆಚಾರ್ಯ, ಸತೀಶ್, ವಿಶಾಲಾಕ್ಷಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ ದಾಸ್, ಉಪಾಧ್ಯಕ್ಷೆ ಚಂದ್ರಾವತಿ ಪೂಜಾರಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರು ಸ್ವಾಗತಿಸಿದರು. ಶಿಕ್ಷಕ ಸಹಸ್ರನಾಮ ವಂದಿಸಿದರು. ಶಿಕ್ಷಕ ಚಂದಪ್ಪ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *