ಬಂಟ್ವಾಳ: ಹಿಂದೂ ಯುವಸೇನೆ, ದತ್ತಗುರು ಶಾಖೆ ಇದರ ಸಕ್ರಿಯ ಕಾರ್ಯಕರ್ತ ಡೆಂಗ್ಯುಜ್ವರದಿಂದ ಮರಣವನ್ನಪ್ಪಿದ ಹರೀಶ ಎಂಬವರ ಮನೆಯವರಿಗೆ ಹಿಂದೂಯುವಸೇನೆ ತಾಲೂಕು ಘಟಕ ಹಾಗೂ ದತ್ತಗುರು ಶಾಖೆಯ ಕಾರ್ಯಕರ್ತರ ಸಹಕಾರದೊಂದಿಗೆ ರು. 11 ಸಾವಿರ ಮೊತ್ತದ ಆರ್ಥಿಕ ಸಹಾಯವನ್ನು ಮೃತನ ತಾಯಿಗೆ ನೀಡಲಾಯಿತು.
BTW_JULY24_7
ಈ ಸಂದರ್ಭ ಯುವಸೇನೆ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಪುಷ್ಪರಾಜ ಜಕ್ರಿಬೆಟ್ಟು, ಪ್ರಮುಖರಾದ ಶಿವಪ್ರಸಾದ್ ಬಂಟ್ವಾಳ, ಸಂತೋಷ್ ಕಬ್ಬಿನ ಹಿತ್ಲು, ವಸಂತ ಕುಮಾರ್ ಮಣಿಹಳ್ಳ, ಸದಾನಂದ ಹಳೇಗೇಟು, ಹಾಗೂ ದತ್ತಗುರು ಶಾಖೆಯ ಅಧ್ಯಕ್ಷ ರಾಘವೇಂದ್ರ, ಉಪಾದ್ಯಕ್ಷ ರುಕ್ಮಯ ಕನಪಾದೆ, ಪ್ರಧಾನಕಾರ್ಯದರ್ಶಿ ಲಕ್ಷ್ಮೀಶ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *