ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಜರಗಲಿರುವ 20ನೆಯ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಮೂಲದ ಸಾಹಿತಿಗಳ, ಸಾಧಕರ, ಕವಿಗಳ, ರಾಜಕೀಯ ಮತ್ತು ಸಾಮಾಜಿಕ ಮುತ್ಸದ್ದಿಗಳ ಚಿತ್ರಗಳನ್ನು ಕೈಯಲ್ಲಿ ಬಿಡಿಸಿದ ಚಿತ್ರಗಳನ್ನು
ಅಗೋಸ್ತು 28 ಶುಕ್ರವಾರದಿಂದ ಆ. 30 ಭಾನುವಾರದವರೆಗೆ 3 ದಿನಗಳ ಕಾಲ ಅಂಚೆಕಾರ್ಡ್ ನಲ್ಲಿ ಅಗೋಸ್ತು 5ರೊಳಗಾಗಿ ಶ್ರೀ ಜಾನ್ ಚಂದ್ರನ್, ಸಂಚಾಲಕರು, ಅಂಚೆ ಕಾರ್ಡ್ನಲ್ಲಿ ಚಿತ್ರ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, `ಶ್ರೀಕೃಷ್ಣ ಸಂಕೀರ್ಣ’, ಕೊಡಿಯಾಲ್ಬೈಲ್, ಮಂಗಳೂರು-3 ಫೋನ್: 2492239 ಈ ವಿಳಾಸಕ್ಕೆ ಕಳುಹಿಸಿಕೊಡು ಈ ಮೂಲಕ ಕೋರಲಾಗಿದೆ.
ಸಮಿತಿಯಿಂದ ಆಯ್ಕೆಗೊಂಡ 150 ಚಿತ್ರಗಳನ್ನು ಪ್ರಕಟಗೊಳಿಸುವುದಲ್ಲದೆ ಪ್ರಥಮ, ದ್ವಿತೀಯ, ತೃತೀಯ, 3 ಜನ ಕೃತಿಕಾರರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲಾಗುವುದು. ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

