ಮಂಗಳೂರು: ತುಳು ಫಿಲ್ಮ್ ಇಂಡಸ್ಟ್ರೀ ಕನ್ನಡಕ್ಕಿಂತ ಶ್ರೀಮಂತವಾಗಿ ಬೆಳೆಯುತ್ತಿದ್ದು ಸೀಮಿತವಾದ ಪ್ರೇಕ್ಷಕ ವರ್ಗದ ನಡುವೆಯೂ ಇನ್ನೂರು ದಿನಗಳನ್ನು ಆಚರಿಸುತ್ತಿರುವುದು ಸಂತೋಷದಾಯಕವಾದ ವಿಚಾರ, ನಮ್ಮಲ್ಲಿ ಭಾಷಾಭಿಮಾನ ಇನ್ನೂ ಬೆಳೆಯಲಿ. ಆದರೆ ಸ್ಪರ್ಧೆಗಳು ಬೇಡ, ಉತ್ತಮವಾದುದನ್ನು ನೀಡಿದರೆ ಜನ ಖಂಡಿತಾ ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಹಲವಾರು ಯಶಸ್ವಿ ಸಿನಿಮಾಗಳು ಸಾಕ್ಷಿಯಾಗಿದೆ ಎಂದು ಚಿತ್ರ ವಿತರಕ ಹಾಗೂ ನಿರ್ಮಾಪಕ ಶ್ರೀನಿವಾಸ್ ಅವರು ತಿಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಅಕಾಡೆಮಿ ಚಾವಡಿಯಲ್ಲಿ ನಡೆದ ತುಳು ಸಿನಿಮಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಚಾಲಿಪೋಲಿಲು ಚಿತ್ರದ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಮತ್ತು ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಇವರನ್ನು ಸೇರಿದ್ದ ಗಣ್ಯರು ಸನ್ಮಾನಿಸಿದರು.

ಕೊಂಕಣಿ, ಕೊಡವ, ಬ್ಯಾರಿ ಮತ್ತು ಲಂಬಾಣಿ ಭಾಷಿಗರನ್ನೂ ಸೇರಿಸಿ ಕೊಂಡು ಪ್ರಾದೇಶಿಕ ಭಾಷಾ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ರಚಿಸುವ ಯತ್ನವನ್ನು ಮಾಡೋಣ ಇದಕ್ಕೆ ಕರ್ನಾ ಟಕ ತುಳು ಸಾಹಿತ್ಯ ಅಕಾಡೆಮಿಯಿಂದಲೇ ಆರಂಭ ಸಿಗಲಿ ಎಂದು ಮುಖ್ಯ ಅತಿಥಿಯಾಗಿದ್ದ ಖ್ಯಾತ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ ಅವರು ತಿಳಿಸಿದರು.
ತುಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನು ಬರೆದ ಚಾಲಿ ಪೊಲೀಲು ಚಿತ್ರದ ನಿರ್ಮಾಪಕರಾದ ಶ್ರೀ ಪ್ರಕಾಶ್ ಪಾಂಡೇಶ್ವರ್ ಮತ್ತು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪರವಾಗಿ ಸನ್ಮಾನಿಸಲಾಯಿತು.
ಚಾಲಿಪೊಲೀಲು ಸಿನಿಮಾ ಯಶಸ್ವಿಯಾಗಿದೆ ಎಂದರೆ ಅದಕ್ಕೆ ನಿರ್ಮಾಪಕ ಮಾತ್ರ ಕಾರಣನಲ್ಲ ಸಿನಿಮಾದ ಯಶಸ್ವಿಗೆ ತುಳುವರು ನಿಜವಾದ ಕಾರಣಿಕರ್ತರು. ತುಳು ಸಿನಿಮಾ ಪ್ರೇಕ್ಷಕರು ಸೀಮಿತವಾಗಿರು ವುದಾದರೂ ಚಾಲಿಪೊಲೀಲು ಸಿನಿಮಾ 225 ದಿನದತ್ತ ಓಡುತ್ತಿದೆ ಎಂದರೆ ಒಬ್ಬ ಪ್ರೇಕ್ಷಕ ಖಂಡಿತಾ ಒಂದ ಕ್ಕಿಂತ ಹೆಚ್ಚು ಬಾರಿ ನೋಡಿದ್ದಾನೆ, ಈ ಅಭಿಮಾನಕ್ಕೆ ನಾನು ಚಿರಋಣಿ ಎಂದು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು.
ನಮ್ಮ ಚಿತ್ರದ ಯಶಸ್ಸನ್ನು ಚಿತ್ರ ತಂಡದ ಕಟ್ಟಕಡೆಯ ವ್ಯಕ್ತಿಗೂ ಸಲ್ಲುತ್ತದೆ ಎಂದು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ತಿಳಿಸಿದರು.
ಚಿತ್ರ ನಿರ್ಮಾಪಕರಾದ ಲ. ಕಿಶೋರ್ ಡಿ’ಶೆಟ್ಟಿ, ದೇವದಾಸ್ ಕಾಪಿಕಾಡ್, ಶೋಧನ್ ಪ್ರಸಾದ್, ಶಿವಧ್ವಜ್, ಡಾ.ಸಂಜೀವ ದಂಡೆಕೇರಿ, ಜಗನ್ನಾಥ ಶೆಟ್ಟಿ ಬಾಳ, ರಿಜಿಸ್ಟ್ರಾರ್ ಚಂದ್ರಹಾಸ್ ರೈ, ನವೀನ್ ಪಡೀಲ್, ಮೋಹನ್ ಕೊಪ್ಪಲ ಉಪಸ್ಥಿತ ರಿದ್ದರು. ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ್ ಅಧ್ಯಕ್ಷತೆ ವಹಿಸಿದ್ದರು.
