gold1

goldಮಂಗಳೂರು: ಕೆಲವು ದಿನಗಳ ಹಿಂದೆ ಸೋಪ್ ಮತ್ತು ಚಾಕಲೇಟ್ ಗಳಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಮತ್ತೊರ್ವ ಆರೋಪಿ ಇದೇ ಸಾಹಸಕ್ಕೆ ಮುಂದಾಗಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದುಬೈಯಿಂದ ಮುಂಜಾನೆ 4.45ರ ಹೊತ್ತಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡು ಪರವನದುಕ್ಕಂ ನಿವಾಸಿ ದಾವೂದ್ ಅಬ್ದುಲ್ ಖಾದರ್ ಎಂಬಾತ 298 ಗ್ರಾಂ ತೂಗುವ ಸುಮಾರು 8.89 ಲಕ್ಷ ಮೌಲ್ಯದ ಚಿನ್ನವನ್ನು ಚಾಕಲೇಟ್ ನಲ್ಲಿ ಹುದುಗಿಸಿಟ್ಟು ಅಕ್ರಮವಾಗಿ ಸಾಗಿಸಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೇ ವೇಳೆ ಪತ್ತೆಯಾದ ಇನ್ನೊಂದು ಪ್ರಕರಣದಲ್ಲಿ ಕಾಸರಗೋಡಿನ ತಳಂಗೆರೆ ನಿವಾಸಿಯಾದ ಅಬ್ದುರ್ರಹಮಾನ್ ಎಂಬಾತ ಫೋಟೊ ಫ್ರೇಮ್ ಮತ್ತು ಹುಡುಗಿಯರು ಬಳಸುವ ಐಲೈನರ್ ನಲ್ಲಿ ಚಿನ್ನವನ್ನು ಅಡಗಿಸಿಟ್ಟು ತಂದು ಪೊಲೀಸರ ಅಥಿತಿಯಾಗಿದ್ದಾನೆ. ಇಬ್ಬರು ಆರೋಪಿಗಳು ಬೆಳಿಗ್ಗೆ 4.45ರ ಜೆಟ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದಿದ್ದರು.

By suddi9

Leave a Reply

Your email address will not be published. Required fields are marked *