

ಸುದ್ದಿ9 ಮಂಗಳೂರು: `ನಳಿನ್ ಕುಮಾರ್ ಕಟೀಲ್ ವಿಜಯೀಭವ’ ಹೀಗೆಂದು ಹಾರೈಸಿದವರು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ. ಅವರು ಮಾ.20ರ ಬೆಳಿಗ್ಗೆ ಕಾವೂರಿನಲ್ಲಿ ಮಂಗಳೂರು ಉತ್ತರವಿಧಾನ ಸಭಾ ಕ್ಷೇತ್ರದ ಚುನಾವಣಾ ಕಚೇರಿ ಉದ್ಘಾಟನೆಯ ಸಂದರ್ಭ ಮಾತಾಡುತ್ತಿದ್ದರು.
ನಂತರ ಮಾತಾಡಿದ ಅವರು ಇಂದು ಉದ್ಘಾಟನೆಗೊಂಡ ಕಛೇರಿ ಪಕ್ಷ ಕಾರ್ಯಕರ್ತ ಹುಮ್ಮಸನ್ನು ಹೆಚ್ಚಿಸಿ ವಿಜಯದ ಪ್ರಥಮ ಮೆಟ್ಟಿಲಾಗಲಿ. ನಳಿನ್ ಕುಮಾರ್ ಕಟೀಲ್ರವರು ಅತ್ಯಧಿಕ ಮತಗಳಿಂದ ವಿಜಯಗಳಿಸಲಿ ಎಂದು ಹಾರೈಸಿದರು. ಚುನಾವಣಾ ಕಚೇರಿಯನ್ನು ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಉದ್ಘಾಟಿಸಿದರು. ಈ ವೇಳೆ ಸಂಸದ, ನಳಿನ್ ಕುಮಾರ್ ಕಟೀಲ್, ಪ್ರತಾಪ್ಸಿಂಹ ನಾಯಕ್, ಮೋನಪ್ಪ ಭಂಡಾರಿ, ರಮೇಶ್ ಖ – ಮಂಡಲ ಅಧ್ಯಕ್ಷರು, ರಾಜೇಶ್ ಕೊಟ್ಟಾರಿ – ಪ್ರ.ಕಾರ್ಯದಶರ್ಿ ಉತ್ತರ ಮಂಡಲ, ಭಾಸ್ಕರ ಸಾಲಿಯಾನ್ – ಪ್ರ.ಕಾರ್ಯದಶರ್ಿ ಉತ್ತರ ಮಂಡಲ, ಕಿಶೋರ್ ರ್ಯೆ – ಜಿಲ್ಲಾ ಪ್ರಧಾನ ಕಾರ್ಯದಶರ್ಿ, ಗಣೇಶ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು
