ಉಪ್ಪಿನಂಗಡಿ: ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡುತ್ತಿರುವ ಇಂದಿನ ದಿನಗಳಲ್ಲಿ ಕಾಲ್ನಡಿಗೆ ಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಯಾತ್ರಾ ತಂಡವೊಂ ದಕ್ಕೆ ರಾತ್ರಿ ವೇಳೆಯಲ್ಲಿ ಸುಂಕದಕಟ್ಟೆ ಮದ್ರಸದಲ್ಲಿ ತಂಗುವ ವ್ಯವಸ್ಥೆ ಮಾಡುವ ಮೂಲಕ ಮಸೀದಿ ಜಮಾ ಅತ್ ಕಮಿಟಿಯವರು ಮಾನವೀಯತೆ ಮೆರೆದಿದ್ದಾರೆ.

madrasa
ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ಜಿಲ್ಲೆಯ ಯಾತ್ರಾಸ್ಥಳವಾ ಗಿರುವ ಸುಬ್ರಹ್ಮಣ್ಯ ಮತ್ತು ಧರ್ಮ ಸ್ಥಳಕ್ಕೆ ಕಾಲ್ನಡಿಗೆಯ ಮೂಲಕ ಸೋಮವಾರ ತಂಡವೊಂದು ಆಗಮಿಸಿದ್ದು, ಕಡಬ ಸಮೀಪದ ಸುಂಕದಕಟ್ಟೆಗೆ ತಂಡವು ಆಗಮಿಸುವ ವೇಳೆಯಲ್ಲಿ ರಾತ್ರಿಯಾಗಿತ್ತು.
ಕಾಡು ದಾರಿಯಲ್ಲಿ ರಾತ್ರಿ ಕಾಲ್ನಡಿಗೆಯಲ್ಲಿ ಸಾಗುವುದು ಅಪಾಯಕಾರಿಯಾಗಿರುವ ಕಾರಣ ಈ ತಂಡವು ರಾತ್ರಿ ಮಲಗಲು ಸ್ಥಳ ನೀಡುವಂತೆ ಸ್ಥಳೀಯರಲ್ಲಿ ವಿನಂತಿಸಿ ಕೊಂಡಿತ್ತು.
ವಿನಂತಿಯಂತೆ ಸುಂಕದಕಟ್ಟೆ ಮೊಹಿಯುದ್ದೀನ್ ಜುಮಾ ಮಸೀದಿಯ ಜಮಾಅತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕಳಾರ ಮತ್ತು ಕಮಿಟಿ ಸದಸ್ಯರು ದಾರುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ರಾತ್ರಿ ತಂಗುವ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾನವೀಯತೆ ಮೆರೆದರು.

By suddi9

Leave a Reply

Your email address will not be published. Required fields are marked *