ಸುದ್ದಿ9 ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿ ನೇರ ವಿಮಾನಯಾನ ಸೇವೆಯನ್ನು ಆರಂಭಿಸಲಾಗುವುದು ಎಂದು ಜೆಟ್ ಏರ್ವೇಸ್ ಘೋಷಿಸಿದೆ. ಕೆಲವು ದಿನಗಳ ಹಿಂದೆ ಅಬುಧಾಬಿ ಮತ್ತು ಮಸ್ಕತ್ಗೆ ನೇರ ವಿಮಾನಯಾನವನ್ನು ಆರಂಭಿಸುವುದಾಗಿ ಏರ್ ಇಂಡಿಯಾ ಹೇಳಿತ್ತು.
ಜೆಟ್ ಏರ್ವೇಸ್ ಮಾರ್ಚ್ 29ರಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿ ಪ್ರತಿದಿನ ನೇರ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ. 9w501 ಸಂಖ್ಯೆಯ ವಿಮಾನ ಪ್ರತಿದಿನ ಸಂಜೆ 5.40ಕ್ಕೆ ಮಂಗಳೂರಿನಿಂದ ಹೊರಡಲಿದ್ದು, ಅಬುಧಾಬಿಗೆ ಸ್ಥಳೀಯ ಕಾಲಮಾನ 8.45ಕ್ಕೆ ತಲುಪಲಿದೆ.
ಅಬುಧಾಬಿಯಿಂದ ಸ್ಥಳೀಯ ಕಾಲಮಾನ 8045ಕ್ಕೆ ಹೊರಡುವ ವಿಮಾನ ಮಂಗಳೂರನ್ನು 1.45ಕ್ಕೆ ತಲುಪಲಿದೆ. ಮಾರ್ಚ್ 29ರಿಂದ ಈ ಸೇವೆಯನ್ನು ಆರಂಭಿಸಲಾಗುತ್ತದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ ಮತ್ತು ಮಸ್ಕತ್ಗೆ ನೇರ ವಿಮಾನಯಾನವನ್ನು ಏರ್ ಇಂಡಿಯಾ ಮಾಡಿಕೊಡಲಾಗುತ್ತದೆ. ಏರ್ ಇಂಡಿಯಾ ಸಹ ಮಾರ್ಚ್ ತಿಂಗಳಿನಲ್ಲಿ ನೇರ ವಿಮಾನಯಾನ ಆರಂಭಿಸಲಿದೆ.
ಏರ್ ಇಂಡಿಯಾ ವೇಳಾಪಟ್ಟಿ : ಪ್ರಸ್ತುತ ಅಬುಧಾಬಿ ಮತ್ತು ಮಸ್ಕತ್ಗಳಿಂದ ಮಂಗಳೂರಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ವಿಮಾನ ಸಂಚರಿಸುತ್ತಿದೆ. ಅಬುಧಾಬಿಯಿಂದ ಸ್ಥಳೀಯ ಕಾಲಮಾನ ಮುಂಜಾನೆ 2.20ಕ್ಕೆ ಹೊರಡುವ ವಿಮಾನ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪುತ್ತಿದೆ. ಮಂಗಳೂರಿನಿಂದ ರಾತ್ರಿ 11ಕ್ಕೆ ಹೊರಡುವ ವಿಮಾನ ಅಬುಧಾಬಿಗೆ ಸ್ಥಳೀಯ ಕಾಲಮಾನ 1.05ಕ್ಕೆ ತಲುಪಲಿದೆ.
ಹಾಗೆಯೇ ಮಸ್ಕತ್ನಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಹೊರಡುವ ವಿಮಾನ ಮಂಗಳೂರಿಗೆ ರಾತ್ರಿ 8.10ಕ್ಕೆ ತಲಪುತ್ತದೆ. ಮಂಗಳೂರಿನಿಂದ ಬೆಳಗ್ಗೆ 10.05ಕ್ಕೆ ಹೊರಡುವ ವಿಮಾನ ಸ್ಥಳೀಯ ಕಾಲಮಾನ 2.40ಕ್ಕೆ ಮಸ್ಕತ್ಗೆ ತಲುಪುತ್ತದೆ.

