ಮಂಗಳೂರು: ಮಂಗಳೂರಿನ ಜಾದೂಗಾರ್ತಿಯರಾದ ಅಪೂರ್ವ ಮಳಿ ಹಾಗೂ ಅಂಜನಾ ಮಳಿ 4 ವಿಶ್ವದಾಖಲೆ ಮಾಡಿದ್ದಾರೆ. 

mali
ಮಳಿ ಸೋದರಿಯರನ್ನು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಯು ಭಾರತದ ಅತ್ಯಂತ ಕಿರಿಯ ಜಾದೂ ಗಾರ್ತಿಯರು ಎಂದು ದಾಖಲಿಸಿತ್ತು. ಈ ಪುಟಾಣಿಗಳು ಈಗಾಗಲೇ 500ಕ್ಕೂ ಅಧಿಕ ಜಾದೂ ಪ್ರದರ್ಶನವನ್ನು ದೇಶದ ವಿವಿಧ ಕಡೆಗಳಲ್ಲಿ ನೀಡಿದ್ದಾರೆ. ಖ್ಯಾತ ಜಾದೂಗಾರ ರಾಜೇಶ್ ಮಳಿ ಮತ್ತು ಶುಭಾರಾಜ್ ದಂಪತಿ ಪುತ್ರಿಯಾಗಿರುವ ಈ ಪುಟಾಣಿಗಳು, ಕೈಚಳಕ ಜಾದೂ ಕಲೆಯನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಜಾದೂಗಾರ ಸಮರ್ಥ್ ಶೆಣೈ ಬಳಿ ಕಲಿಯುತ್ತಿದ್ದಾರೆ. ಪ್ರಸಕ್ತ ಕೆನರಾ ಹೈಸ್ಕೂಲ್ ಸಿಬಿಎಸ್‍ಸಿಯಲ್ಲಿ ಅಂಜನಾ 2ನೇ ಹಾಗೂ ಅಪೂರ್ವ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.  ಲಂಡನ್ ಮೂಲದ ವಾರ್ ಆಫ್ ವಲ್ರ್ಡ್ ರೆಕಾಡ್ರ್ಸ್ ಫೌಂಡೇಶನ್ ಮಳಿ ಸೋದರಿಯರÀ ದಾಖಲೆ ಪರಿಗಣಿಸಿ ವಿಶ್ವ ದಾಖಲೆ ಪತ್ರ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದೆ. 

By suddi9

Leave a Reply

Your email address will not be published. Required fields are marked *