ಮಂಗಳೂರು: ದಿನಸಿ ಸಾಮಾಗ್ರಗಳನ್ನು ಹೊತ್ತು ಹೊರಟಿದ್ದ ಲಾರಿಯೊಂದು ಸಮುದ್ರದ ಹಿನ್ನೀರಿಗೆ ಬಿದ್ದ ಘಟನೆ ಮಂಗಳೂರು ಹಳೆ ಬಂದರು ಧಕ್ಕೆಯಲ್ಲಿ ಮಂಗಳವಾರ ನಡೆದಿದೆ. ಘಟನೆಗೆ ಲಾರಿಯ ಬ್ರೇಕ್ ಫೇಲ್ ಆದುದೇ ಕಾರಣ ಎಂದು ತಿಳಿದುಬಂದಿದೆ. ಬಂದರಿನಿಂದ ಮೆಣಸು, ಎಣ್ಣೆ, ಸಕ್ಕರೆ, ಅವಲಕ್ಕಿ, ಅಕ್ಕಿ ಮುಂತಾದ ದಿನಸಿ ಸಾಮಾಗ್ರಿಗಳನ್ನು ಹೊತ್ತು ಬಿ.ಸಿ ರೋಡ್, ಕಲ್ಲಡ್ಕ, ಪಾಣೆಮಂಗಳೂರು ಮುಂತಾದ ಪ್ರದೇಶಗಳ ಮಾರುಕಟ್ಟೆಯತ್ತ ಹೊರಟಿದ್ದ ಲಾರಿಯನ್ನು ಚಾಲಕ ಹಿಮ್ಮುಖವಾಗಿ ಚಲಾಯಿಸುತ್ತಿದ್ದಾಗ ಬ್ರೇಕ್ ಫೇಲ್ ಆಗಿ ಈ ಘಟನೆ ಸಂಭವಿಸಿದೆ. ಕೂಡಲೇ ಚಾಲಕ ಲಾರಿಯಿಂದ ಹೊರ ಜಿಗಿದು ಪಾರಾದರೆ, ಲಾರಿಯ ಹಿಂದೆ ಹಗ್ಗ ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬರನ್ನು ನಂತರ ಸ್ಥಳೀಯ ಕಾಮರ್ಿಕರು ರಕ್ಷಿಸಿದರು. ಈ ಘಟನೆಯಲ್ಲಿ ಲಕ್ಷಾಂತರ ರೂ, ನಷ್ಟ ಸಂಭವಿಸಿದೆ.



