ಮೂಡುಬಿದರೆ: ಆಳ್ವಾಸ್ ವರ್ಣ ವಿರಾಸತ್ ಪ್ರಯುಕ್ತ ನೀಡುವ 2015 ಸಾಲಿನ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿಗೆ ಹೈದರಾಬಾದ್ನ ಖ್ಯಾತ ಹಿರಿಯ ಚಿತ್ರಕಲಾವಿದ ತೋಟ ವೈಕುಂಠಂ ಆಯ್ಕೆಯಾಗಿದ್ದಾರೆ.

ಜನವರಿ 11ರಂದು ಆಳ್ವಾಸ್ ವಿರಾಸತ್ನ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ 25 ಸಆವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.
ತೋಟ ವೈಕುಂಠ: ಆಂಧ್ರಪ್ರದೇಶದ ಬೂರುಗುಪಲ್ಲಿ ಎಂಬಲ್ಲಿ ಜನಿಸಿದ ತೋಟ ವೈಕುಂಠಂ ತನ್ನ ಕಲಾಭ್ಯಾಸವನ್ನು ಹೈದರಾಬಾದ್ನ ಕಲಾ ಶಾಲೆಯಲ್ಲಿ ಹಾಗೂ ಬರೋಡಾದ ಎಂ.ಎಸ್.ವಿಶ್ವವಿದ್ಯಾನಿಲಯದಲ್ಲಿಕಲಾವಿದ ಕೆ.ಜಿ.ಸುಬ್ರಹ್ಮಣ್ಯಂ ಮಾರ್ಗದರ್ಶನದಲ್ಲಿಅಧ್ಯಯನ ಮಾಡಿದರು. ಸುಮಾರು 30 ವರ್ಷಗಳ ತಮ್ಮ ಕಲಾ ಜೀವನದಲ್ಲಿ ಬಾರತ ಸಕರ್ಾರದರಾಷ್ಟ್ರೀಯ ಪ್ರಶಸ್ತಿ, ಬೋಪಾಲ್ ಭಾರತ ಭವನದ ಬಿಯೆನ್ನಲ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅವರ ಕಲಾಕೃತಿಗಳು ನ್ಯೂಯಾಕರ್್, ಲಂಡನ್, ಬಮರ್ಿಂಗ್ ಹ್ಯಾಮ್ ಹೀಗೆ ಹಲವಾರು ದೇಶಗಳಲ್ಲಿ ಪ್ರದರ್ಶನಗೊಂಡು ಅಲ್ಲಿನ ಗ್ಯಾಲರಿಗಳಲ್ಲಿ ಸಂಗ್ರಹವಾಗಿರುವುದು ವಿಶೇಷ. ಹಲವಾರು ತೆಲುಗುಕಲಾತ್ಮಕ ಚಲನ ಚಿತ್ರಗಳಿಗೆ ಕಲಾ ನಿದರ್ೆಶಕರಾಗಿಯೂ ದುಡಿದಿದ್ದು `ದೇಸಿ’ ಎಂಬ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
