ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದರೆಯ ಆಶ್ರಯದಲ್ಲಿ `ಆಳ್ವಾಸ್ ವರ್ಣ ವಿರಾಸತ್- 2015’ರ ಅಂಗವಾಗಿ ಎರಡು ಚಿತ್ರಕಲಾ ಶಿಬಿರಗಳನ್ನು ಆಯೋಜಿಸಲಾಗಿದ್ದು, ಜನವರಿ 2 ರಿಂದ 11 ರವರೆಗೆ ರಾಷ್ಟ್ರಮಟ್ಟದ ಆದಿವಾಸಿ ಕಲಾವಿದರ ಚಿತ್ರಕಲಾ ಶಿಬಿರ ಹಾಗೂ ಜನವರಿ 6 ರಿಂದ 11 ರವರೆಗೆ ರಾಷ್ಟ್ರಮಟ್ಟದ ಸಮಕಾಲೀನ ಕಲಾವಿದರ ಚಿತ್ರಕಲಾ ಶಿಬಿರವನ್ನು ವಿದ್ಯಾಗಿರಿಯ ರತ್ನಾಕರವರ್ಣಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಗುಜರಾತ್, ಅಸ್ಸಾಂ, ಕೊಲ್ಕತ್ತಾ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಖ್ಯಾತ ಚಿತ್ರ ಕಲಾವಿದರು ಪಾಲ್ಗೊಳ್ಳಲಿದ್ದು, ಚಿತ್ರಕಲಾ ಶಿಬಿರವಾಗಿ, ಕಣ್ಮನ ಸೆಳೆಯುವ ಚಿತ್ರ ಕಲಾಕೃತಿಗಳು ಈ ಕಲಾ ಶಿಬಿರದಲ್ಲಿ ಮೂಡಿಬರಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
