oplus_4194304

ಬಂಟ್ವಾಳ : ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಅನುದಾನದಿಂದ ಸುಮಾರು ಒಂದು ಕೋ.ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣ  ನಿರ್ಮಾಣಕ್ಕೆ ಸಹಕರಿಸಿದವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಪದವಿ ಪೂರ್ವ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ನಡೆಸಲಾಯಿತು.

oplus_4194304


ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಪುಂಜಾಲಕಟ್ಟೆ ಶಾಲೆಯನ್ನು ಆಯ್ಕೆ ಮಾಡಿದುದರಿಂದ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉತ್ತಮ ಶಿಕ್ಷಣ ದೊರಕುವಂತಾಗಿದೆ. ಶಾಲಾಭಿವೃದ್ಧಿಗೆ ಈಗಾಗಲೇ  ಅನುದಾನ ಒದಗಿಸಿದ್ದು, ನಿರಂತರ ಅಭಿವೃದ್ಧಿ ಕಾರ್ಯಗಳೊಂದಿಗೆ ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.  


ಮಕ್ಕಳು ಉತ್ತಮ ಶಿಕ್ಷಣ ಪಡೆದು ಮನೆ, ಶಾಲೆ, ಸಮಾಜವನ್ನು ಬೆಳಗುವಂತಾಗಲು ಅವರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರ ಕರ್ತವ್ಯವಾಗಿದೆ.ಶಾಲಾಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ ಎಂದರು.  
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಲ್ಯಾನ್ಸಿ ಪಿಂಟೋ ಅವರು ಮಾತನಾಡಿ, ಶುಭ ಹಾರೈಸಿದರು.  ಕೆಪಿಎಸ್ ಪ್ರಾಂಶುಪಾಲರಾದ ಡಾ| ಸರೋಜಿನಿ ಆಚಾರ್ಯ, ಉಪ ಪ್ರಾಂಶುಪಾಲ ಗಣೇಶ್ ಬಿ., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ವಿಟ್ಠಲ,, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಿವಾಕರ ಶೆಟ್ಟಿ ಕಂಗಿತ್ತಿಲು, ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಫ್ರಾನ್ಸಿಸ್ ವಿ.ವಿ., ಸಲಹೆಗಾರ ಕೆ.ಮೋನಪ್ಪ ಪೂಜಾರಿ ಕಂಡೆತ್ಯಾರು, ಸದಸ್ಯರಾದ ಲಿಯೋ ನೊರೊನ್ಹಾ, ಫೆಲಿಕ್ಸ್ ಡಿಕೋಸ್ತ, ಸಿರಿಲ್ ಸಿಕ್ವೆರಾ, ವಿವೇಕ್ ವಿನ್ಸೆಂಟ್ ಪಾಯಸ್, ಜೋಯಲ್ ಮೆಂಡೊನ್ಸಾ, ಲಿಯೋ ರೊಡ್ರಿಗಸ್, ಗ್ರೆಗರಿ ಸೇರಾ, ರೊನಾಲ್ಡ್ ಸಿಕ್ವೆರಾ, ಮೋಲಿ ಫೆರ್ನಾಂಡೀಸ್ , ಸೆಲೆಸ್ಟಿಯನ್ ಡಿಸೋಜ, ಗ್ರೇಸಿ ರೀಟಾ ರೆಬೆಲ್ಲೋ, ಸೊಸೈಟಿ ಮುಖ್ಯ ಕಾರ್ಯ ನಿರ್ವಹಣಾಽಕಾರಿ ವಲೇರಿಯನ್ ಡಿ.ಸೋಜಾ ,ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ದೇವದಾಸ ಕುಲಾಲ್, ಕುಶಾಲ್ ಗೌಡ, ಶೇಖ್ ಸುಲೈಮಾನ್, ಯೋಗೇಶ್ ಆಚಾರ್ಯ, ರಫೀಕ್, ಸತೀಶ್ ಕೆ.ಪೂಜಾರಿ, ಮನೋಹರ್, ಪುಷ್ಪಲತಾ, ಕುಸುಮ ಮೋಹನ್, ಶಮೀಮ್ ಬಾನು, ಅನಿತಾ, ಜಮೀಲ ರಫೀಕ್, ಮಮತಾ ಪೂಜಾರಿ, ಪ್ರೀತಿ ಹಾಗೂ  ಪೋಷಕರು, ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಗಣೇಶ್ ಬಿ.ಸ್ವಾಗತಿಸಿದರು.ಉಪನ್ಯಾಸಕಿ ಸುಪ್ರಿತಾ ಅಭಿನಂದನಾ ಪತ್ರ ವಾಚಿಸಿದರು. ಶಿಕ್ಷಕ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

By Suddi9