ಮುಂಬಯಿ: ಕೊಂಕ್ಣಿ ಸಂಗೀತ ಲೋಕದ ಹಿರಿಯ ಸಂಗೀತಗಾರ ‘ಸಂಗೀತ ಸಾಮ್ರಾಟ್’ ಬಿರುದಾಂಕಿತ ಹೆನ್ರಿ ಡಿ’ಸೋಜಾ ಅವರ ಅಗಲಿಕೆ ದುಃಖದಾಯಕವಾದುದು. ವಿಶ್ವಪ್ರಸಿದ್ಧ ‘ಯೇ ಯೇ ಕತ್ರಿನಾ’ ಇನ್ನಿತರ ಹಲವು ಹಾಡುಗಳ ಮೂಲಕ ಲಕ್ಷಾಂತರ ಸಂಗೀತ ಪ್ರೇಮಿಗಳ ಹೃದಯ ಗೆದ್ದಿದ್ದ ಅವರ ಕೊಡುಗೆ ಕೊಂಕಣಿ ಸಂಗೀತ ಕ್ಷೇತ್ರದ ಜೀವಾಳವಾಗಿದೆ. ತಮ್ಮ ಸುಮಧುರ ಕಂಠ ಹಾಗೂ ಕಲಾಸೇವೆಯ ಮೂಲಕ ಅವರು ಕೊಂಕಣಿ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಬೆಳಗಿಸಿದ ಮಹಾನ್ ಚೇತನ. ಅವರ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾ ನಿ ಆಲ್ವಾರಿಸ್ ತಿಳಿಸಿದರು. 


ಕೊಂಕಣಿ ಸಂಗೀತ ಲೋಕದ ಹಿರಿಯ ಸಂಗೀತ ಕಲಾವಿದನಾಗಿ, ಯೇ ಯೇ ಕತ್ರಿನಾ, ಆಮಿಂ ದೋಗಿ ಸೆಜಾರಾ, ಚಂದ್ರೆಮ್ ಉದೇವ್ನ್ ಆಯ್ಲೊ ಇತ್ಯಾದಿ ಸುಪ್ರಸಿದ್ಧ ಹಾಡುಗಳ ಮೂಲಕ ವಿಶ್ವಪ್ರಸಿದ್ಧರೆಣಿಸಿದ ‘ಸಂಗೀತ ಸಾಮ್ರಾಟ್’, ‘ಕಲಾ ರತ್ನ್’ ಬಿರುದಾಂಕಿತ ಪ್ರಸಿದ್ಧ ಗಾಯಕರಾಗಿದ್ದು ಕಳೆದ ಶನಿವಾರ ಆಗಲಿದ ಹೆನ್ರಿ ಡಿ’ಸೋಜಾ ಗೋರೆಗಾಂ (ಬಸ್ರಿಕಟ್ಟೆ, ಕೊಪ್ಪ ಚಿಕ್ಕಮಗಳೂರು) ಅವರಿಗೆ ಸ್ಟ್ಯಾನಿ ಆಲ್ವಾರೆಸ್ ಶ್ರದ್ಧಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಿದರು.

ಮೆಂಗ್ಳೂರಿಯನ್ ಕೊಂಕ್ಣಿ ಸಮಾಜ್ (ಮುಂಬಯಿ)  ಮತ್ತು ಟೀಮ್ ಮೆಂಗ್ಳೂರಿಯನ್ ಇಂದಿಲ್ಲಿ ಶನಿವಾರ ಸಂಜೆ ಅಂಧೇರಿ ಪೂರ್ವದ ಶುಕ್ರಾನ್ ಲಾಂಜ್ ಬ್ಯಾಂಕ್ವೆಟ್‌ನಲ್ಲಿ ಶೋಕಸಭೆ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ಡಿ’ಸೋಜ ನಂದಳಿಕೆ ಅವರು ಹೆನ್ರಿ ಅವರ ಸ್ಥೂಲ ಮಾಹಿತಿಯನ್ನೀಡಿ ಹೆನ್ರಿ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ನಮನ ಸಲ್ಲಿಸಿ ಬಾಷ್ಪಾಂಜಲಿ ಅರ್ಪಿಸಿದರು.

ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿರುವ ಕೊಂಕಣಿ ಗಾನಲೋಕದ ಬೆಳ್ಳಿ ಚುಕ್ಕಿ, ‘ಕಲಾ ರತ್ನ’ ಬಿರುದಾಂಕಿತ ಹೆನ್ರಿ ಅವರ ನಿಧನ ಅಪಾರ ನಷ್ಟವೇ ಸರಿ. ಅವರೋರ್ವ ಅಪರೂಪದ ಮಹಾನ್ ಗಾಯಕ. ತಮ್ಮ ಮಧುರವಾದ ಕಂಠ ಹಾಗೂ ಭಾವಪೂರ್ಣ ಕಲಾ ಸೇವೆಯಿಂದ ಜನಮನಗೆದ್ದ ಅಪ್ರತಿಮ ಕಲಾವಿದನಾಗಿ ಕೊಂಕಣಿ ರಂಗವನ್ನು ಶ್ರೀಮಂತಗೊಳಿಸಿದ ಯುಗಪುರುಷ ಹೆನ್ರಿ. ಕೊಂಕಣಿಯ ಹಿರಿಮೆಯ ಹೆನ್ರಿ ಡಿ’ಸೋಜಾ ಅವರ ನಿಧನದಿಂದ ಕೊಂಕಣಿ ಸಂಗೀತ ಲೋಕ ತನ್ನ ಶ್ರೇಷ್ಠ ಚೇತನವೊಂದನ್ನು ಕಳೆದುಕೊಂಡಂತಾಗಿದೆ ಎಂದು ವಾಲ್ಟರ್ ನಂದಳಿಕೆ ಖೇದ ವ್ಯಕ್ತಪಡಿಸಿದರು.

ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ (ಮಂಗಳೂರು) ಕಾರ್ಯಾಧ್ಯಕ್ಷ ‘ಸಹಕಾರ ರತ್ನ’ ಅನಿಲ್ ಲೋಬೊ ಫೆರ್ಮಾಯಿ, ಅವರು ಕಾಲವಾದರೂ ಅವರ ಗಾನಸ್ವರ ಹಾಗೂ ಸುಮಧುರ ಗೀತೆಗಳು ಎಂದೆಂದಿಗೂ ಅಮರವಾಗಿ ಉಳಿಯಲಿವೆ. ಆಗಲಿದ ಗಾನಲೋಕದ ಶ್ರೇಷ್ಠ ಚೇತನ, ಕೊಂಕಣಿಯ ಹೆಮ್ಮೆಯ ಹೆನ್ರಿ ಡಿ’ಸೋಜಾ ಸಂದರ್ಭೋಚಿತವಾಗಿ ಮಾತನಾಡಿ ಅಗಲಿದ ಚೇತನದ ಭಾವಚಿತ್ರಕ್ಕೆ ಪುಷ್ಫಾಂಜಲಿಗೈದು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಂಗೀತಕಾರ ಕೊಂಕಣ್ ಕೀರ್ ಲಾರೇನ್ಸ್ ಸಲ್ಡಾನ್ಹಾ, ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಅಡ್ವೊಕೇಟ್ ಪಿಯೂಸ್ ವಾಸ್, ಅಡ್ವೊಕೇಟ್ ಜೆನೆವೀವ್ ಪಿ.ವಾಸ್, ಸಿಸಿಸಿಐ ಸ್ಥಾಪಕ  ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಸಿನೆಮಾ ನಿರ್ದೇಶಕರುಗಳಾದ ಲಾರೇನ್ಸ್ ಬಿ.ಡಿ’ಸೋಜಾ, ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು, ಗ್ರೆಗರಿ ಡಿ’ಅಲ್ಮೇಡಾ, ಸ್ಟಂಟ್ ನಿರ್ದೇಶಕರುಗಳಾದ ಸುನಿಲ್ ರೋಡ್ರಿಗಸ್, ನವೀನ್ ಲೋಬೋ ಮೊಡಂಕಾಪು, ಉದ್ಯಮಿಗಳಾದ ಆಲ್ವಿನ್ ಸಿಕ್ವೇರಾ ಗಾರ್ಡಾಡಿ, ಕೊನಾಲ್ಡ್ ಜೆ.ಬ್ಯಾಪ್ಟಿಸ್ಟ್ (ಫಾಲ್ಕನ್), ಜೋನ್ ವಿಲ್ಸನ್ ಲೋಬೊ ಥಾಣೆ, ಗಿಲ್ಬರ್ಟ್ ಸೈಮನ್ ಡಿಸೋಜಾ (ಜುವಾನಿಟಾ), ಪ್ರೆಮೀಳಾ ವಿ.ಮಥಾಯಸ್, ಲಿಯೋ ಫೆರ್ನಾಂಡಿಸ್ (ಜೆರಿಮೇರಿ), ಕ್ಲೋಡಿ ಮೊಂತೆರೋ ಮರೋಳ್, ಜ್ಯೂಲಿಯೆಟ್ ಪಿರೇರಾ, ವೈಲೆಟ್ ವಿಲ್ಸನ್ ಲೋಬೋ, ರುಥ್ ವಿಲ್ಸನ್ ಫೆರ್ನಾಂಡಿಸ್, ಸ್ಟೇನಿ ಬೇಳಾ ಮಂಗ್ಳೂರು, ರೋಶನ್ ನೆಲ್ಲಿಗುಡ್ಡೆ, ಫಿಲಿಪ್ ಫ್ರಾಂಕ್ ಆಗ್ರಾರ್, ಫ್ಲೋರಾ ಡಿಸೋಜಾ ಜೆರಿಮೆರಿ, ಸಿರಿಲ್ ಕಾಸ್ತೆಲಿನೋ, ಲ್ಯಾನ್ಸಿ ಬಾರ್ಬೋಜಾ (ಲೋರೆಟ್ಟೊ), ತಾರಾ ಆರ್.ಬಂಟ್ವಾಳ್, ಜೋಸ್ಫಿನ್ ರೋಡ್ರಿಗಸ್, ರೇಶ್ಮಾ ಅನಿಲ್ ಡಿಅಲ್ಮೇಡಾ ಸೇರಿದಂತೆ ಮಹಾನಗರದಲ್ಲಿನ ಗಣ್ಯರನೇಕರು ಹಾಜರಿದ್ದು ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.  

ಸೈಂಟ್ ಜೋನ್ ಕೊಂಕಣಿ ಸಮುದಾಯ್ ಮರೋಳ್ ಇದರ ಅಧ್ಯಕ್ಷೆ ಸುನೀತಾ ಎ.ಸುವಾರೆಸ್ ಸಭೆ ನಿರ್ವಾಹಿಸಿದರು. ರೋನ್ಸ್ ಬಂಟ್ವಾಳ್ ಸಂತಾಪ ಸೂಚಿಸಿದರು. ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ವಿನ್ಸೆಂಟ್ ಕಾಸ್ತೆಲಿನೋ ವಿದ್ಯಾವಿಹಾರ್ ಪ್ರಾರ್ಥನೆಗೈದು ಕಾರ್ಯಕ್ರಮ ಸಮಾಪಿ ಗೊಳಿಸಿದರು.

By Suddi9

Leave a Reply

Your email address will not be published. Required fields are marked *