ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾಗಿರಿ ಬಂಟ್ವಾಳ, ಇಲ್ಲಿ ಸ್ಕೌಟ್, ಗೈಡ್ಸ್, ಎನ್.ಸಿ.ಸಿ ಘಟಕದ ವತಿಯಿಂದ ‘ಬರವುದ ಬಿತ್ತಿಲ್ಡ್ ಆಟಿದ ಲೇಸ್’ ಕಾರ್ಯಕ್ರಮವು ನಡೆಯಿತು. 
ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಡಿ ಮಂಚಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಆಟಿ ತಿಂಗಳಿನ ಮಹತ್ವವನ್ನು ಕುರಿತು ತಿಳಿಸಿದರು.
 
 
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ  ಹರಿಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸ್ಥಳೀಯ ಆಚರಣೆಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ  ಚೈತ್ರ ಶೆಟ್ಟಿ , ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿಯಾದ  ವೀಣಾ ಉಪಸ್ಥಿತರಿದ್ದರು. 
 
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ವಿವಿಧ ತುಳು ನೃತ್ಯ , ಹಾಡು, ಪ್ರಹಸನ ನಡೆಸಲಾಯಿತಲ್ಲದೆ  ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಆಟಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು. 
ಆಟಿ ತಿಂಗಳ ವಿಶಿಷ್ಟ ಖಾದ್ಯಗಳನ್ನು ಪೋಷಕರ ಸಹಯೋಗದಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.  ಯಸ್ಮಿತಾ ವೈ ಮತ್ತವರ ತಂಡ ತುಳು ಪಾಡ್ದನ ಹಾಡಿ ಗಮನಸೆಳೆದರು.
 
ವಿದ್ಯಾರ್ಥಿಗಳಾದ ತನುಷ್ ಶೆಟ್ಟಿ ಸ್ವಾಗತಿಸಿದರು,  ಪ್ರಜ್ಞೇಶ್ ವಂದಿಸಿ,  ಕುಮಾರಿ ಆಶ್ನಿ.ಆರ್.ಶೆಟ್ಟಿ ಮತ್ತು ಕು. ನಿತೀಕ್ಷಾ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *