ಬಂಟ್ವಾಳ : ಓಂ ಫ್ರೆಂಡ್ಸ್ ಕ್ಲಬ್ ( ರಿ ) ಕಳ್ಳಿಗೆ ಪಚ್ಚಿನಡ್ಕ ಇದರ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಸಂಘದ ಶ್ರೀ ಕೃಷ್ಣ ವೇದಿಕೆಯಲ್ಲಿ ನಡೆಯಿತು.ಸಂಘದ ಮಹಾ ಪೋಷಕರಾದ ಚಂದ್ರಾವತಿ ಸೇಸಪ್ಪ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅವರು ಸಭಾಧ್ಯಕ್ಷತೆ ವಹಿಸಿದ್ದರು.

ಓಂ ಫ್ರೆಂಡ್ಸ್ ರಾಧಾಕೃಷ್ಣ ಬಾಲ ಗೋಕುಲದ ಅಧ್ಯಕ್ಷೆ ಅಮಿತಾ ವಿಶ್ವನಾಥ್ ದಾಸರ ಕೋಡಿ ಪ್ರಸ್ತಾವನೆಗೈದರು. ಸಂಘದ ಉಪಾಧ್ಯಕ್ಷ ಸದಾಶಿವ ಆಚಾರ್ಯ, ಕೋಶಾಧಿಕಾರಿ ರಾಜೇಶ್ ಆಚಾರ್ಯ, ಸಂಚಾಲಕ ಸಂತೋಷ್ ಪಚ್ಚಿನಡ್ಕ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಚರಣ್ ರಾಜ್ ಪಚ್ಚಿನಡ್ಕ ಸ್ವಾಗತಿಸಿದರು. ಹರೀಶ್ ಶೆಟ್ಟಿ ಪಡು ನಿರೂಪಿಸಿದರು. ನಂತರ ಬಾಲ ಗೋಕುಲದ ಮಾತಾಜಿ ಹಾಗು ಮಕ್ಕಳಿಂದ ವಿವಿಧ ನೃತ್ಯ ಪ್ರದರ್ಶನ ನಡೆಯಿತು. ಸಂಘದ ಸದಸ್ಯರು ತಾವು ಮನೆಯಲ್ಲಿ ತಯಾರಿಸಿ ತಂದಿದ್ದ ಸುಮಾರು 32 ಬಗೆ ಆಟಿಯ ತಿಂಡಿ ತಿನಸುಗಳ ಸಹಭೋಜನ ನಡೆಯಿತು.
